ಇತ್ತೀಚಿನ ಸುದ್ದಿ
ಐಎಂಎ ಬಹುಕೋಟಿ ಹಗರಣ: ಮಾಜಿ ಸಚಿವ ರೋಶನ್ ಬೇಗ್ ನಿವಾಸಕ್ಕೆ ಇಡಿ ದಾಳಿ; ಸಿಆರ್ ಪಿಎಫ್ ಭದ್ರತೆ
05/08/2021, 10:37
ಬೆಂಗಳೂರು(reporterkarnataka.com): ಐಎಂಎ ಬಹುಕೋಟಿ ಹಗರಣದ ಆರೋಪಿ ಮಾಜಿ ಸಚಿವ ರೋಶನ್ ಬೇಗ್ ನಿವಾಸ ಸೇರಿದಂತೆ ಒಟ್ಟು 6 ಕಡೆಗಳಿಗೆ ಅನುಷ್ಠಾನ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದೆ.
ರೋಶನ್ ಬೇಗ್ ಅವರು ಸುಮಾರು 40 ಕೋಟಿ ರೂ. ಪಡೆದಿರುವ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗ್ ಅವರ ಬ್ಯಾಂಕ್ ಅಕೌಂಟ್ ಕೂಡ ಮುಟ್ಟುಗೋಲು ಹಾಕಲಾಗಿತ್ತು. ಆಸ್ತಿ ಜಫ್ತಿಗೆ ನ್ಯಾಯಾಲಯ ಆದೇಶ ನೀಡಿತ್ತು. ತನಿಖೆಯ ಮುಂದಿನ ಭಾಗ ಎನ್ನುವಂತೆ ಇದೀಗ ಇಡಿ ಅಧಿಕಾರಿಗಳ ತಂಡ ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಬೇಗ್ ಅವರ ನಿವಾಸಕ್ಕೆ ದಾಳಿ ನಡೆಸಿದೆ. ಸಿಆರ್ ಪಿಎಫ್ ಹಾಗೂ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದಾರೆ.