7:38 PM Monday24 - August 2026
ಬ್ರೇಕಿಂಗ್ ನ್ಯೂಸ್
ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು

ಇತ್ತೀಚಿನ ಸುದ್ದಿ

ಕಥೊಲಿಕ್ ಸಭಾ ಆಂಜೆಲೊರ್ ಘಟಕದಿಂದ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟ: ವಾಲಿಬಾಲ್ ಪಂದ್ಯದಲ್ಲಿ ಬೊಂದೆಲ್ ಎ ತಂಡಕ್ಕೆ ಟ್ರೋಫಿ; ಥ್ರೊಬಾಲ್ ನಲ್ಲಿ ಬೊಂದೆಲ್ ತಂಡ ಪ್ರಥಮ

11/12/2023, 19:01

ಮಂಗಳೂರು(reporterkarnataka.com): ಮಂಗಳೂರು ಕಥೊಲಿಕ್ ಸಭಾ ಪ್ರದೇಶದ ಆಂಜೆಲೊರ್ ಘಟಕವು ಗಾರ್ಡಿಯನ್ ಏಂಜೆಲ್ ಧರ್ಮಕ್ಷೇತ್ರ, ನಾಗೋರಿ, ಮಂಗಳೂರು ಇದರ ಅಂತರ ಧರ್ಮೀಯ ಸೌಹಾರ್ದ ಆಯೋಗದ ಸಹಯೋಗದೊಂದಿಗೆ ಭಾನುವಾರ ಡಿಸೆಂಬರ್ 2023ರಂದು ಕಪಿತಾನಿಯೋ ಶಾಲಾ ಕ್ರೀಡಾಂಗಣದಲ್ಲಿ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟವನ್ನು ಏರ್ಪಡಿಸಿತ್ತು.


ಸಿಟಿ ಮತ್ತು ಸಿಟಿ ಎಪಿಸ್ಕೊಪಲ್ ವಲಯದ ಪುರುಷರ 13 ವಾಲಿಬಾಲ್ ಮತ್ತು ಮಹಿಳೆಯರ 10 ಥ್ರೋಬಾಲ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕ್ರೀಡಾಕೂಟದ ಅಂಗವಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಧರ್ಮಕ್ಷೇತ್ರದ ವ್ಯಕ್ತಿಗಳಾದ ಪ್ರದೀಪ್ ಡಿಸೋಜ ಹಾಗೂ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು. ವಾಲಿಬಾಲ್ ಪಂದ್ಯದಲ್ಲಿ ಬೊಂದೆಲ್ ಎ ತಂಡ ಟ್ರೋಫಿ ಗೆದ್ದರೆ ಬೊಂದೆಲ್ ಬಿ ತಂಡ ಎರಡನೇ ಸ್ಥಾನವನ್ನು ಪಡೆಯಿತು. ಥ್ರೊಬಾಲ್ ಪಂದ್ಯದಲ್ಲಿ ಬೊಂದೆಲ್ ತಂಡ ಪ್ರಥಮ ಸ್ಥಾನವನ್ನು ಹಾಗೂ ವಾಮಂಜೂರು ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು