ಇತ್ತೀಚಿನ ಸುದ್ದಿ
ಕುಂಜೂರು ಪಂಜ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಲಕ್ಷ್ಮೀ ಪೂಜೆ: ಅನ್ನದಾನ ರೂವಾರಿ ಕಾವ್ಯಶ್ರೀ ಲೋಕೇಶ್ ಬಲ್ಯಾಯರಿಗೆ ಸನ್ಮಾನ
04/12/2023, 10:10
ಪುತ್ತೂರು(reporterkarnataka.com): ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿ ವತಿಯಿಂದ ಪುತ್ತೂರು ಕುಂಜೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಶ್ರೀ ಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆಯ ಅನ್ನಸಂತರ್ಪಣೆ ರೂವಾರಿಯಾದ ಕಾವ್ಯ ಶ್ರೀ ಲೋಕೇಶ್ ಬಲ್ಯಾಯ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಪುತ್ತಿಲ ಪರಿವಾರದ ಸ್ಥಾಪಕಾಧ್ಯಕ್ಷ ಅರುಣ್ ಪುತ್ತಿಲ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಸಭಾಧ್ಯಕ್ಷತೆ ಯನ್ನು ಸಂಟ್ಯಾರು ವಿಶ್ವನಾಥ ಗೌಡ ಜಿ. ವಹಿಸಿದ್ದರು.
ಮಂಗಳೂರು ಮಂಗಳಾದೇವಿ ವಾರಿಣಿ ನಾಗರಾಜ್ ಧಾರ್ಮಿಕ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಮಾರ್ತ, ಪ್ರಗತಿಪರ ಕೃಷಿಕ ಬಿ. ರಾಮ್ ಭಟ್ ಬಂಗಾರಡ್ಕ, ಹಾಲು ಒಕ್ಕೂಟ ಸಮಿತಿಯ ರಾಮಚಂದ್ರ ಪ್ರಭು ದೇವಸ್ಯ, ಪ್ರಗತಿಪರ ಕೃಷಿಕ ಗೋಪಾಲ ಭಟ್, ಕುಂಜೂರು ಪಂಜ, ಪುತ್ತಿಲ ಪರಿವಾರದ ಸುಬ್ರಮಣ್ಯ ವಾಣಿ ಬಲ್ಯಾಯ, ವರಮಹಾಲಕ್ಷ್ಮಿ ಪೂಜಾ ಸಮಿತಿ ಮಾಜಿ ಅಧ್ಯಕ್ಷ ಉಮಾವತಿ ಪುರಂದರ ರೈ ಗೆಣಸಿನಕುಮೇರು ಮತ್ತಿರರು ಉಪಸ್ಥಿತರಿದ್ದರು.














