ಇತ್ತೀಚಿನ ಸುದ್ದಿ
ಬೊಮ್ಮಾಯಿ ಚೊಚ್ಚಲ ಸಚಿವ ಸಂಪುಟ: ಯಾರಿಗೆಲ್ಲ ಮಂತ್ರಿ ಸ್ಥಾನ?; ದ.ಕ., ಉಡುಪಿ ಜಿಲ್ಲೆಯಿಂದ ಯಾರಿಗೆ ಅವಕಾಶ?
04/08/2021, 10:07
ಬೆಂಗಳೂರು(reporterkarnataka.com): ರಾಜ್ಯ ಸಚಿವ ಸಂಪುಟ ಇಂದು ರಚನೆಯಾಗುವ ಬಹುತೇಕ ಸಾಧ್ಯತೆಗಳಿದ್ದು, ಯಾರೆಲ್ಲ ಡಿಸಿಎಂ ಆಗುತ್ತಾರೆ? ಯಾರಿಗೆಲ್ಲ ಸಚಿವರಾಗುವ ಭಾಗ್ಯ ಒದಗಿ ಬರಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹಬ್ಬಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಚೊಚ್ಚಲ ಸಂಪುಟ ರಚನೆ ಇದಾಗಿದೆ.
2023ರಲ್ಲಿ ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ವರಿಷ್ಠರು ಅಳೆದು ತೂಗಿ ಸಚಿವ ಪಟ್ಟಿ ಸಿದ್ಧಪಡಿಸಿದ್ದಾರೆ. ರಿಪೋರ್ಟರ್ ಕರ್ನಾಟಕಕ್ಕೆ ದೊರೆತ ಮಾಹಿತಿ ಪ್ರಕಾರ ಸಂಭಾವ್ಯ ಸಂಪುಟದಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ನೋಡೋಣ.
ಸಂಭಾವ್ಯ ಸಚಿವರು: ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಬಿ.ಶ್ರೀರಾಮುಲು, ಜೆ.ಸಿ.ಮಾಧುಸ್ವಾಮಿ, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಪೂರ್ಣೀಮಾ ಶ್ರೀನಿವಾಸ್, ಎಂ.ಟಿ.ಬಿ.ನಾಗರಾಜ್, ಡಾ.ನಾರಾಯಣಗೌಡ, ಪಿ.ರಾಜೀವ್, ವಿ.ಸುನೀಲ್ ಕುಮಾರ್, ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರಾಮದಾಸ್ ಸಂಪುಟ ಸೇರ್ಪಡೆ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.