12:14 PM Thursday18 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ನಂತೂರು ಬಳಿ ರಸ್ತೆ ಮಧ್ಯೆ ಸಮಾಧಿ ತರಹ ತಲೆ ಎತ್ತಿರುವ ಡ್ರೈನೇಜ್ ಪಿಟ್: ಸ್ಕೂಟರ್ ಪಲ್ಟಿ; ಸವಾರ ಆಸ್ಪತ್ರೆಗೆ

07/11/2023, 23:45

ಮಂಗಳೂರು(reporterkarnataka.com): ನಗರದ ನಂತೂರು ಜಂಕ್ಷನ್ ಬಳಿ ಇಂದು ರಾತ್ರಿ ಸ್ಕೂಟರೊಂದು ಅವೈಜ್ಞಾನಿಕವಾಗಿ ನಿರ್ಮಿಸಿದ ಡ್ರೈನೇಜ್ ಪಿಟ್ ನಿಂದ ಅಪಘಾತಕ್ಕೀಡಾದ ಪರಿಣಾಮ ಸ್ಕೂಟರ್ ಸವಾರ ಯುವಕನೊಬ್ಬ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆದಾಖಲಿಸಲಾಗಿದೆ.


ಗಾಯಾಳುವನ್ನು ಶಿಫ್ಕಿ(21) ಎಂದು ಗುರುತಿಸಲಾಗಿದೆ. ಸ್ಕೂಟರ್ ಪಲ್ಟಿಯಾದ ಪರಿಣಾಮ ಯುವಕನ ಗಲ್ಲ, ಕೈ ಮತ್ತು ಕಾಲಿಗೆ ಗಾಯಗಳಾಗಿವೆ.
ಮಲ್ಲಿಕಟ್ಟೆ ಕಡೆಯಿಂದ ನಂತೂರು ಕಡೆಗೆ ಸಾಗುವ ಹಾದಿಯಲ್ಲಿ ನಂತೂರು ಬಸ್ ತಂಗುದಾಣದ ಸಮೀಪದಲ್ಲೇ ರಸ್ತೆ ಮಧ್ಯೆ ಈ ಡ್ರೈನೇಜ್ ಪಿಟ್ ಇದೆ. ಇದು ರಸ್ತೆ ಮಟ್ಟದಿಂದ ಎತ್ತರದಲ್ಲಿದ್ದು ದ್ವಿಚಕ್ರ ವಾಹನ ಸವಾರರಿಗೆ ಯಾವಾಗಲೂ ಅಪಾಯಕಾರಿಯಾಗಿದೆ. ಈ ಡ್ರೈನೇಜ್ ಪಿಟ್ ರಸ್ತೆ ಮಧ್ಯದಲ್ಲಿ ಸಮಾಧಿ ತರಹ ಎದ್ದು ಕಾಣುತ್ತದೆ. ಈ ರಸ್ತೆಯಲ್ಲಿ ದಿನಾಲೂ ಸಂಚರಿಸುವವರು ಸ್ವಲ್ಪ ಜಾಗರೂಕತೆ ವಹಿಸಿ ಇದರ ಮೇಲೆ ತಮ್ಮ ವಾಹನಗಳ ಚಕ್ರವನ್ನೇರಿಸುತ್ತಾರೆ. ಆದರೆ ಹೊಸ ಸವಾರರಿಗೆ ಇದು ಹೊಸತಾಗಿರುವುದರಿಂದ ಅಪಾಯಕಾರಿಯಾಗಿದೆ. ಇವತ್ತು ನಡೆದದ್ದು ಕೂಡ ಇದೇ ಅಚಾತುರ್ಯ. ಸ್ಕೂಟರ್ ನಿಂದ ಸವಾರ ಎಸೆಯಲ್ಪಟ್ಟು ಗಲ್ಲ ಮತ್ತು ಕೈಕಾಲಿಗೆ ಗಾಯಗಳಾಗಿವೆ. ಗಾಯಾಳುವನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು