ಇತ್ತೀಚಿನ ಸುದ್ದಿ
ಮೂಡಬಿದ್ರೆ: ಇಬ್ಬರ ಬಂಧನ; 3 ಲಕ್ಷ ರೂ. ಮೌಲ್ಯದ ಕಳವು ಮಾಡಿದ 2 ಬೈಕ್ ವಶ
07/11/2023, 20:07
ಮೂಡಬಿದ್ರೆ(reporterkarnataka.com):ಮೂಡಬಿದ್ರೆ ಠಾಣ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇಬ್ಬರನ್ನು ಬಂಧಿಸಿದ ಪೊಲೀಸರು ಕಳವು ಮಾಡಿದ ಬೈಕ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೋಟೆಬಾಗಿಲು ನಿವಾಸಿಗಳಾದ
ಸಯ್ಯದ್ ಝಾಕೀರ್ ( 20)ಹಾಗೂ ಮೊಹಮ್ಮದ್ ಶಾಹಿ( 24) ಎಂದು ಗುರುತಿಸಲಾಗಿದೆ.
ಮೂಡಬಿದ್ರೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಮಂಗಳವಾರ ಬೆಳಗಿನ ಜಾವ ಮೂಡಬಿದ್ರೆ ಠಾಣೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ Royal Enfield Classic 350 ಮೋಟಾರು ಸೈಕಲ್ ಅಕ್ಟೋಬರ್ 24 ಮತ್ತು 25ರ ರಾತ್ರಿ ಮೂಡಬಿದ್ರೆ ಜೈನ್ ಪೇಟೆಯ ಬಡಗ ಬಸದಿ ಎದುರು ಇರುವ ದೇವಿಕೃಪಾ ಅಪಾರ್ಟ್ ಮೆಟ್ ನ ಪಾರ್ಕಿಂಗ್ ಏರಿಯಾದಲಿ, ನಿಲಿಸಿದನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳು ಮೂಡಬಿದ್ರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದಲ್ಲಿರುವ ಎವರ್ ಪ್ರೈಸ್ ರೆಸಿಡೆನ್ಸ್, ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ KA-19-EU-0009 ನೇ Royal Enfield Classic 350 ಮೋಟಾರು ಸೈಕಲನ್ನು ಕೂಡ ಕಳವು ಮಾಡಿ ಪೇಪರ್ ಮಿಲ್ ಬಳಿ ಇರುವ ಕೀರ್ತಿ ನಗರ ಕ್ರಾಸ್ ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಅಲ್ಲಿಂದ KA-19-EU-0009 ನೇ Royal Enfield Classic 350 ಮೋಟಾರು ಸೈಕಲನ್ನು ಕೂಡ ಸ್ವಾಧೀನಪಡಿಸಿಕೊಂಡಿದ್ದು ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 3 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಡಿಸಿಪಿ ಸಿದಾರ್ಥ ಗೊಯಲ್ (ಕಾ&ಸು), ಡಿಸಿಪಿ ದಿನೇಶ್ ಕುಮಾರ್ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ಅವರ ನಿರ್ದೇಶನದಂತೆ, ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ. ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೊಹಮ್ಮದ್ ಇಟ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಪಾಲ್ಗೊಂಡಿದ್ದರು.