ಇತ್ತೀಚಿನ ಸುದ್ದಿ
ಹುಲಿ ಚರ್ಮ ಮಾಹಿತಿ: ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ದೇವಸ್ಥಾನದ ಅರ್ಚಕ ಶಾಖಾದ್ರಿ ನಿವಾಸಕ್ಕೆ ಅರಣ್ಯಾಧಿಕಾರಿ ಭೇಟಿ
27/10/2023, 15:01

ಚಿಕ್ಕಮಗಳೂರು(reporterkarnataka.com) : ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ದೇವಸ್ಥಾನದ ಅರ್ಚಕ ಶಾಖಾದ್ರಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೋ ವೈರಲ್ ಹಿನ್ನೆಲೆಯಲ್ಲಿ ಶಾಖಾದ್ರಿ ಮನೆಗೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದೆ. ಮನೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಮನೆಯ ಹೊರ ಭಾಗದಲ್ಲಿ ಕಾದು ಕುಳಿತರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಶಾಖಾದ್ರಿ ಸೈಯದ್ ಗೌಸ್ ಮೋಯಿದ್ದೀನ್ ನಿವಾಸಕ್ಕೆ ಆರ್.ಎಫ್. ಓ. ಮೋಹನ್ ನೇತೃತ್ವದಲ್ಲಿ ತಂಡ ಭೇಟಿ ನೀಡಿದೆ.
ಮನೆಯ ಮುಂಭಾಗದಲ್ಲಿ ಅರಣ್ಯ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.