5:50 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಪರಶುರಾಮ ಮೂರ್ತಿಗೆ ಅಪಚಾರ; ಶಾಸಕ ಸುನಿಲ್ ಕುಮಾರ್ ಬಿಜೆಪಿಯಿಂದ ಉಚ್ಚಾಟಿಸಿ: ಸುಭಾಸ್ ಹೆಗ್ಡೆ ಒತ್ತಾಯ

17/10/2023, 10:08

ಕಾರ್ಕಳ(reporterkarnataka.com): ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ವಿಶ್ವ ಗುರು ಆಗುತ್ತಿರುವ ಸಂದರ್ಭದಲ್ಲಿ ನಕಲಿ ಪರಶುರಾಮರ ಮೂರ್ತಿ ನಿರ್ಮಾಣ ಹಿಂದುತ್ವಕ್ಕೆ ಅಪಚಾರ ಮಾಡಿರುವುದು ಭಯೋತ್ಪಾದನೆಗೆ ಸಮಾನ.
ಹಿಂದುತ್ವಕ್ಕೆ ಅಪಚಾರ ಮಾಡಿದ ಸುನಿಲ್ ಕುಮಾರ್ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಹಿಂದುತ್ವ ಉಳಿಸಿ ಎಂದು ಉಚ್ಚಾಟಿತ ಬಿಜೆಪಿ ಮುಖಂಡ ಸುಭಾಸ್ ಹೆಗ್ಡೆ ಒತ್ತಾಯಿಸಿದ್ದಾರೆ.
ಕಾರ್ಕಳ ಬೈಲೂರುನಲ್ಲಿ ನಿರ್ಮಾಣಗೊಂಡು ಶಾಸಕ ಸುನಿಲ್ ಕುಮಾರ್ ಅವರಿಂದ ಅಪಚಾರಕ್ಕೊಳಗಾದ ಕರಾವಳಿ ಸೃಷ್ಟಿಕರ್ತ ಪರಶುರಾಮರ ಹೊಸ ಮೂರ್ತಿಯನ್ನು ಸರಕಾರ ಶಾಸ್ತ್ರ ಪೂರ್ವಕವಾಗಿ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಿ ಧರ್ಮ ಉಳಿಸಲಿ ಎಂದು ಹೆಗ್ಡೆ ತಿಳಿಸಿದ್ದಾರೆ.
ಪರಶು ರಾಮರು ವಿಷ್ಣುವಿನ ಅವತಾರವೆತ್ತವರು. ಕಾರ್ಕಳದಲ್ಲಿ ಅಂತಹ ಪುಣ್ಯ ಪುರುಷರ ಮೂರ್ತಿ ಕಾರ್ಕಳದಲ್ಲಿ ನಿರ್ಮಾಣ ಕಂಡಾಗ ಹಿಂದೂ ಧರ್ಮದ ಎಲ್ಲರೂ ಸಂತಸ ಪಟ್ಟಿದ್ದರು.
ಎಲ್ಲಾ ಹಿಂದೂ ಸಂಘಟನೆಗಳು ಕೂಡ ಈ ವಿಚಾರ ಬಂದಾಗ ಸಂತಸ ಪಟ್ಟಿದ್ದರು. ಹೆಮ್ಮೆ ಪಟ್ಟಿದ್ದರು. ಆದರೆ ಈ ಮೂರ್ತಿಯನ್ನು ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಬಂದವರು ನಕಲಿ ಮಾಡುತ್ತಾರೆ ಎಂದು ಕನಸಲ್ಲಿ ಕೂಡ ಎಣಿಸಿರಲಿಲ್ಲ ಎಂದು ಅವರು
ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ವಿಶ್ವ ಗುರು ಆಗುತ್ತಿದೆ. ಇಂತಹ ಸಂತಸದ ದಿನಗಳಲ್ಲಿ ಕರಾವಳಿಯ ಸೃಷ್ಟಿ ಕರ್ತನ ಮೂರ್ತಿಯನ್ನೇ ನಕಲಿ ಮಾಡಿರುವುದು ಹಿಂದುತ್ವಕ್ಕೆ ಮಾಡಿದ ದ್ರೋಹ. ಹಿಂದುತ್ವಕ್ಕೆ ಯಾರೇ ದ್ರೋಹ ಮಾಡಿದರು ಕ್ಷಮೆ ಇಲ್ಲ. ಅದು ಭಯೋತ್ಪಾದನೆಗೆ ಸಮಾನ.
ಈ ದ್ರೋಹದಲ್ಲಿ ಸುನಿಲ್ ಕುಮಾರ್ ಅವರ ನೇರ ಪಾತ್ರ ಇರುವುದರಿಂದ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವಂತೆ ಉಚ್ಚಾಟಿತ ಬಿಜೆಪಿ ಮುಖಂಡ ಸುಭಾಶ್ಚಂದ್ರ ಹೆಗ್ಡೆ ಅಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು