6:56 AM Wednesday14 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಜಂಗಮರೆಂದರೆ ಯಾರು?

08/10/2023, 20:32

ಜಂಗಮರೆಂದರೆ ಯಾರು? ಯಾರು??
ಯಾರು? ಯಾರು?? ಜಂಗಮರೆಂದರೆ!! ಪ!!
ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು
ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು
ಕಲ್ಲು ಮನಸುಗಳ ಹೂವಾಗಿಸುವದೆಡೆಗೆ
ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!!

ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು
ಬಿನ್ನಹದಿಂದಲೆ ಜೀವನದ ಸಾರವ ಸಾರೊ
ಕಣ್ಣು ಕಣ್ಣುಗಳ ತೆರೆಸೊ ಜ್ಞಾನ ಭಂಡಾರವು
ಹುಣ್ಣುಮೆಯ ತಂಪನೇ ಚೆಲ್ಲೊ ಕಾಂತಿಯೆ!! ಜಂಗಮ!!

ಬದುಕಿನ ತಿರುಳನ್ನು ವಚನದಲಿ ಸಾರುತ್ತ
ಹೃದಯಗಳಲಿ ಅಮೃತವನೆ ಧಾರೆಯೆರೆವ
ಹದಿಬದೆಯ ಧರ್ಮದ ತಿರುಳನೆ ಬಿತ್ತುವ
ವಿಧಿತದಲಿ ಸರ್ವರಾ ಬಾಳನೆ ಬೆಳಗುವವರೆ!! ಜಂಗಮ!!

ಕಾಮ ಕ್ರೋಧ ಲೋಭ ಮೋಹ ಮತ್ಸರವ
ಯಾಮದಿಂದಲೆ ತೊರೆದು ಸಾಧುವಾಗಿಹ
ಸೋಮ ಸೂರ್ಯರಂತೆಯೆ ಜಗ ಕಾಯುವ
ನಾಮ ನಿರ್ದೇಶಿತ ಕಾವಿಯ ಕಾರ್ಮಿಕರೆ!! ಜಂಗಮ!!

– ಅನಿತಾ ಸಾಲಿಮಠ ಅಂತರಗಂಗೆ
(ವಿದ್ಯಾ ಚೇತನ ಪದವಿ ಪೂರ್ವ ಕಾಲೇಜು ಲಿಂಗಸೂರ್)

ಇತ್ತೀಚಿನ ಸುದ್ದಿ

ಜಾಹೀರಾತು