ಇತ್ತೀಚಿನ ಸುದ್ದಿ
ಬಲೂಚಿಸ್ತಾನ್: ಈದ್ ಮಿಲಾದ್-ಉಲ್-ನಬಿ ಮೆರವಣಿಯಲ್ಲಿ 2 ಆತ್ಮಾಹುತಿ ಬಾಂಬ್ ಸ್ಫೋಟ; 56ಕ್ಕೂ ಹೆಚ್ಚು ಮಂದಿ ಸಾವು
29/09/2023, 22:47
ಮಸ್ತುಂಗ್(reporterkarnataka.com): ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ಅಲ್-ಫಲಾಹ್ ಮಸೀದಿ ಬಳಿ ಈದ್ ಮಿಲಾದ್-ಉಲ್-ನಬಿ ಮೆರವಣಿಗೆಯಲ್ಲಿ ಎರಡು ಆತ್ಮಾಹುತಿ ಬಾಂಬ್ ಸ್ಫೋಟಗೊಂಡು 56ಕ್ಕೂ ಹೆಚ್ಚು
ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಸ್ಫೋಟದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಾವನ್ನಪ್ಪಿದ್ದಾರೆ, ಮಸ್ತುಂಗ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆ ಬಿಟ್ಟು ಕದಲದಂತೆ ಸೂಚನೆ ನೀಡಲಾಗಿದೆ.