4:16 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಆಗಸ್ಟ್ ತಿಂಗಳ ಟಾಪರ್ ಆಗಿ ರಿಶಿ ಖಾರ್ವಿ ಮತ್ತು ಪ್ರತೀಕ್ಷಾ ಅನಿಲ್ ಆಯ್ಕೆ

09/09/2023, 22:39

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ಟಾಪರ್ ಆಗಿ ರಿಶಿ ಖಾರ್ವಿ ಹಾಗೂ ಪ್ರತೀಕ್ಷಾ ಅನಿಲ್
ಆಯ್ಕೆಯಾಗಿದ್ದಾರೆ.
ರಿಷಿ ಖಾರ್ವಿಯು ಕಂಚಗೋಡುವಿನ ನಾಗರಾಜ್ ಖಾರ್ವಿ ಹಾಗೂ ಭಾರತಿ ದಂಪತಿ ಪುತ್ರಿ. ವಯಸ್ಸು 5 ವರ್ಷ 7 ತಿಂಗಳು. ಈಕೆ ವಿದುಷಿ ಸಹನಾ ರೈ ಅವರ ಬಳಿ 1ವರ್ಷದಿಂದ ಹಾಡು ಕಲಿಯುತ್ತಿದ್ದಾಳೆ. ಭಾಷಣ ಮಾಡುತ್ತಾಳೆ. ಚಿತ್ರ ಬಿಡಿಸುವುದು ಇವಳಿಗೆ ತುಂಬಾ ಇಷ್ಟ. ಯೋಗ ಮಾಡುತ್ತಾಳೆ. ವಾಯ್ಸ್ ಆಫ್ ಆರಾಧನಾದಲ್ಲಿ ಭಾಗವಹಿಸಿ ಅತಿ ಹೆಚ್ಚು ಜನರಿಗೆ ಪರಿಚಿತಳಾಗಿದ್ದಾಳೆ. ಕರ್ನಾಟಕ ಜನಸ್ಪಂದನ ಕುಂದಾಪ್ರ ಕಲಾವಿದ ತಂಡ ಇದರಲ್ಲೂ ಭಾಗವಹಿಸಿದ್ದಾಳೆ. ಬಹುಮಾನವನ್ನು ಮಲಬಾರ್ ಗೋಲ್ಡ್ ನಲ್ಲಿ ಪಡೆದಿದ್ದಾಳೆ. ಮತ್ತೆ ಪುತ್ತೂರು ಕಾರ್ಯಕ್ರಮದಲ್ಲೂ ಕೂಡ ಬಹುಮಾನ ಪಡೆದಿದ್ದಾಳೆ.


ಪ್ರತೀಕ್ಷಾ ಅನಿಲ್ ಮುಂಡುಗೋಡಿನ ಬ್ಲೂಮಿಂಗ್ ಬರ್ಡ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆ ಅನಿಲ್ ಕುಮಾರ್ ಉತ್ತಮನ್ ಹಾಗೂ ಶೈಲಜಾ ಅವರ ಪುತ್ರಿ. ಭರತನಾಟ್ಯ, ವೆಸ್ಟರ್ನ್ ಡಾನ್ಸ್, ಕರಾಟೆ, ಯೋಗ, ಸಂಗೀತ, ಚಿತ್ರ ಬಿಡಿಸುವುದು, ಭಜನೆ, ಕ್ರೀಡೆ ವಿವಿಧ ಕ್ಷೇತ್ರದಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆಯಾಗಿದ್ದಾಳೆ. ತನ್ನ 8ನೇ ವಯಸ್ಸಿನಲ್ಲಿ ಭರತನಾಟ್ಯ ಅಭ್ಯಾಸವನ್ನು ಶಶಿರೇಖಾ ಭೈಜು ಅವರಲ್ಲಿ ಆರಂಭಿಸಿದ್ದಾಳೆ. ವೆಸ್ಟರ್ನ್ ಡ್ಯಾನ್ಸ ಸಂದೀಪ್ ಕೋರಿ ಅವರ ಬಳಿ ಕಲಿಯುತ್ತಿದ್ದಾಳೆ. ಕರಾಟೆಯನ್ನು ಸುರೇಂದ್ರ ನ್ಯಾಸರ್ಗಿ ಅವರ ಹತ್ತಿರ ಅಭ್ಯಾಸ ಮಾಡುತ್ತಿದ್ದಾಳೆ. ಕರ್ನಾಟಕ ಸಂಗೀತವನ್ನು ರೇಖಾ ಮರಾಠೆ ಅವರಲ್ಲಿ ಕಲಿಯುತ್ತಿದ್ದಾಳೆ. ಯೋಗ ಅಭ್ಯಾಸವನ್ನು ಶರತ್ ಮಾರ್ಗಿ ಲಡ್ಕ ಸುಳ್ಯ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ರಾಜ್ಯಮಟ್ಟದ ಯೋಗದಲ್ಲಿ ಮಹಾತ್ಮ ಗಾಂಧಿ ಟ್ಯಾಲೆಂಟ್ ಯೋಗರತ್ನ ಅವಾರ್ಡ್, ಬೆಂಗಳೂರು ಇಂಟರ್ನ್ಯಾಷನಲ್ ಟ್ಯಾಲೆಂಟ್ ಅವಾರ್ಡ್. ಸೂರ್ಯ ನಮಸ್ಕಾರ ಸಂಗಮ ೨೦೨೦ ಸೂರ್ಯ ನಮಸ್ಕಾರ ಸಿರಿ ಅವಾರ್ಡ್ ಬಂದಿದೆ. ಬಿ.ಕೆ ಐಯ್ಯಂಗಾರ್ ಸ್ಮರಣಾರ್ಥ 7ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯಶಿಪ್ ೨೦೨೩ ಮೆರಿಟ್ ಸರ್ಟಿಫಿಕೇಟ್ 4ನೇ ಸ್ಥಾನ ಬಂದಿದೆ. ಶರತ್ ಮಾರ್ಗಿ ಲಡ್ಕ ಅವರ ಮಾರ್ಗದರ್ಶನದಲ್ಲಿ ಶ್ರೀ ದುರ್ಗಾ ಬಾಲಗೋಕುಲ ತೌಡುಗೋಳಿ ವಾರ್ಷಿಕೋತ್ಸವದಲ್ಲಿ ಭಜನೆ ತಂಡದಲ್ಲಿ ಮತ್ತು ಕ್ರೀಡೆಯಲ್ಲಿ ಭಾಗವಹಿಸಿ ಅಭಿನಂದನ ಪತ್ರ ಪಡೆದುಕೊಂಡಿದ್ದಾಳೆ.ಆಲ್ ಇಂಡಿಯಾ ಮುಕ್ತ ಕರಾಟೆ ಚಾಂಪಿಯನ್ ಶಿಪ್ ೨೦೨೧ನಲ್ಲಿ ಮೂರನೇ ಸ್ಥಾನ ಈಕೆಗೆ ಬಂದಿದೆ, ಎರಡನೇ ಮುಕ್ತ ರಾಜಮಟ್ಟದ ಕರಾಟೆ ಚಾಂಪಿಯನ್ ಶಿಪ್2022 ಕಾಟ ಮತ್ತು ಕುಮಿಟಿ ಎಲ್ಲಿ 3ನೇ ಸ್ಥಾನ ಬಂದಿದೆ. ರಾಜಮಟ್ಟದ ಮುಕ್ತ ಕರಾಟೆ ಚಾಂ ಪಿಯನ್ ಶಿಪ್ 2023ರಲ್ಲಿ ಭಾಗವಹಿಸಿ ಪ್ರಶಸ್ತಿ ಬಂದಿದೆ.. ವೇದಂ ಮತ್ತು ಸೋತ್ರಂ ಆನ್ಲೈನ್ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನಪತ್ರ ಬಂದಿದೆ. ಮೇ ಚಿತ್ರ ಯಾನ ಮಕ್ಕಳ ಜೋಳಿಗೆ ಭಾಗವಹಿಸಿ ಅಭಿನಂದನೆ ಪತ್ರ ಬಂದಿದೆ. ಕಲಾತ್ಮಕ ಜಗತ್ತು 2023 ಯೋಗದಲ್ಲಿ ಭಾಗವಹಿಸಿ ಅಭಿನಂದನ ಪತ್ರ ಬಂದಿದೆ,ವಿಜಯ ಪಥ ಪ್ರಸ್ತುತಿ ಆಯೋಜಿಸಿದ ಯೋಗದಲ್ಲಿ ರಾಜ್ಯಮಟ್ಟದ ಅಭಿನಂದನಪತ್ರ ಬಂದಿದೆ. ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ಅಡಿಷನಲ್ಲಿ ಭಾಗವಹಿಸಿದ್ದಾರೆ. 2023-24 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಛದ್ಮವೇಷದಲ್ಲಿ ಭಾಗವಹಿಸಿ ಮೂರನೇ ಸ್ನಾನ ಬಂದಿದೆ. ಕುಡುವಸ್ ಫೆಸ್ಟಿವಲ್ 2023 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಬಂದಿದೆ, ನೆಲ್ಲಿ ತೀರ್ಥದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದವರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವ ರತ್ನ ಪ್ರಶಸ್ತಿಯನ್ನು ಪಡೆದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು