3:44 AM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಬಿ. ಎಲ್. ಸಂತೋಷ್ ಮೊದಲು ಬಿಜೆಪಿ ಶಾಸಕರನ್ನು ಉಳಿಸಿಕೊಳ್ಳಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ

01/09/2023, 18:54

ಹುಬ್ಬಳ್ಳಿ(reporterkarnataka.com): ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಮೊದಲು ತಮ್ಮಶಾಸಕರನ್ನು ಉಳಿಸಿಕೊಳ್ಳಲಿ, ಮತ್ತೆ ಬೇರೆ ಪಕ್ಷದ 45 ಮಂದಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ 45 ಪ್ರಮುಖ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಂತೋಷ್ ಹೇಳಿಕೆಗೆ ಮಾಧ್ಯವದವರಿಗೆ
ಪ್ರತಿಕ್ರಿಯೆ ನೀಡಿ ಅವರು ಮಾತನಾಡಿದರು.
ಸಂತೋಷ್ ನಾಳೆಯೇ ಆಪರೇಶನ್ ಕಮಲ ನಡೆಸಲಿ, ಎಷ್ಟು ಕಾಂಗ್ರೆಸ್ ನಾಯಕರನ್ನು ಅವರು ಸೆಳೆಯುತ್ತಾರೋ ನೋಡಿಬಿಡೋಣ ಎಂದು ಹಳೆಯ ಬಿಜೆಪಿಗರಾದ ಶೆಟ್ಟರ್ ಸವಾಲೆಸೆದರು.
ಕಾಂಗ್ರೆಸ್ ಪಕ್ಷದ್ದು 135 ಶಾಸಕರನ್ನೊಳಗೊಂಡ ಗಟ್ಟಿಮುಟ್ಟಾದ ಸರಕಾರ, ಇಂಥ ಸರಕಾರವನ್ನು ಯಾರು ತಾನೆ ಬಿಟ್ಟು ಹೋಗುವುದು ಸಾಧ್ಯ? ಎಂದು ಹೇಳಿದ ಶೆಟ್ಟರ್, ರಾಜ್ಯದಲ್ಲಿ ಬಿಜೆಪಿ ಒಂದು ಮುಳುಗುವ ಹಡಗಿನ ಸ್ಥಿತಿಯಲ್ಲಿದೆ, ಸಂತೋಷ್ ತಮ್ಮ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು