10:05 AM Sunday8 - March 2026
ಬ್ರೇಕಿಂಗ್ ನ್ಯೂಸ್
ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ

ಇತ್ತೀಚಿನ ಸುದ್ದಿ

ಸರಕಾರದ ಯೋಜನೆಗಳನ್ನು ತಾಯಂದಿರು ಸಮರ್ಪಕವಾಗಿ ಬಳಸಿಕೊಳ್ಳಬೇಕು: ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ

08/08/2023, 22:13

ಮಂಗಳೂರು(reporterkarnataka.com): ನಗರದ ಬಜಾಲ್ ಪಕ್ಕಲಡ್ಕ ಯುವಕ ಮಂಡಲದ ಅಂಗನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕಣ್ಣೂರು ವಲಯ ಅಂಗನವಾಡಿ ಕಾರ್ಯ ಕರ್ತೆಯರಿಂದ ‘ಆತಿಡೊಂಜಿ ದಿನ ಹಾಗೂ ವಿಶ್ವ ಸ್ತನ್ಯ ಪಾನ್ಯ ಸಪ್ತಾಹ’ ಕಾರ್ಯಕ್ರಮ ಜರುಗಿತು.





ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿ ರಶ್ಮಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಎದೆ ಹಾಲು ಉಣಿಸುವ ತಾಯಂದಿರಲ್ಲಿ ಸೌಂದರ್ಯ ಹೆಚ್ಚುತ್ತದೆ.



ಎದೆಹಾಲು ಕುಡಿಸುವಂತ ತಾಯಿಯಂದಿರಲ್ಲಿ ಬ್ರೆಸ್ಟ್ ಕ್ಯಾನ್ಸರ್ ತುಂಬಾ ಕಡಿಮೆಯಾಗಿರುತ್ತದೆ, ತಾಯಿ ಮಗುವಿನ ಬಾಂಧವ್ಯ ಜಾಸ್ತಿಯಾಗುತ್ತದೆ. ಈಗಿನವರು ಒಂದು ಕೈಯಲ್ಲಿ ಮೊಬೈಲ್ ನಲ್ಲಿ ಮಗ್ನ ರಾಗಿ ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೋ ಇಲ್ಲ ಆನ್ನೋದರ ಗಮನ ಇಲ್ಲದೆ, ಮಗುವಿಗೆ ತಾಯಿಯ ಸ್ಪರ್ಶ ಕಡಿಮೆಯಾಗುತ್ತಿದೆ ಎಂದರು.

ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಮಾತನಾಡಿ,
ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ನಮ್ಮಲ್ಲಿ ಹಳೆ ಕಾಲದ ಆಹಾರ ಪದ್ಧತಿ ವಿರಳವಾಗಿದೆ.


ಸರಕಾರದ ಎಲ್ಲ ಯೋಜನೆಗಳನ್ನು ತಾಯಿಯಂದಿರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ತಾಯಿ ಹಾಲು ಉಣಿಸುವಾಗ ಆದಷ್ಟು ಮೊಬೈಲ್ ನಿಂದ ದೂರವಿದ್ದು ಪುಸ್ತಕಗಳ ಪ್ರೀತಿ ಬೆಳೆಸಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಆರೋಗ್ಯವಂತ ಮನಸ್ಥಿತಿಯಿಂದ ಬೆಳೆಯಲು ಸಾಧ್ಯ ಎಂದು ಅವರು ನುಡಿದರು.

ಎಕ್ಕೂರು ಪ್ರಾಥಮಿಕ ಕೇಂದ್ರದ ಡಾ.ರೆಹನ ಮಾತನಾಡಿ, ತಾಯಿ ಎದೆ ಹಾಲು ಉಣಿಸುವ ವಿಧಾನ ಹಾಗೂ ಮಗುವಿನ ಜೊತೆ ಹಾಲು ಉಣಿಸುವ ಸಂದರ್ಭದಲ್ಲಿ ಮೊಬೈಲ್ ಇನ್ನಿತರ ವಿಷಯಗಳಲ್ಲಿ ನಮ್ಮನ್ನು ವಿಚಲಿತಗೊಳಿಸದೇ ಮಗುವಿನ ಜೊತೆಗೆ ಮನಪೂರ್ವಕವಾಗಿ ಸಮಯ ನೀಡಿದಾಗ ಮಾತ್ರ ಮಗು ಉತ್ತಮವಾಗಿ ಬೆಳೆಯಲು ಸಾಧ್ಯ. ಸರಿಯಾಗಿ ಬ್ರೆಸ್ಟ್ ಫೀಡ್ ಮಾಡಿ ಅವಾಗ ತಾಯಿ ಕೂಡ ಆರೋಗ್ಯ ವಾಗಿರುತ್ತಾರೆ. ಹಾಲು ಉಣಿಸುವುದು ದೇವರು ಕೊಟ್ಟ ಅತ್ಯಂತ ದೊಡ್ಡ ವರ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಿಡಿಪಿಒ ಶ್ವೇತಾ,ಕಣ್ಣೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಅನುಪಮಾ, ಬಜಾಲ್ ಪಕಲಡ್ಕ ಯುವಕ ಮಂಡಲ ಶಿಕ್ಷಕಿ ಆಶಾ, ಸಹಾಯಕಿ ತುಳಸಿ, ಜಪ್ಪಿನ ಮೊಗರು ಯುವಕ ಮಂಡಲ ಅಂಗನವಾಡಿ ಶಿಕ್ಷಕಿ ಪವಿತ್ರ,ಗೀತಾ ಚೌಟ ಹಾಗೂ ಇತರ ಅಂಗನವಾಡಿ ಶಿಕ್ಷಕರು ಉಪಸ್ಥಿತರಿದ್ದರು.




ಕಾರ್ಯಕ್ರಮದಲ್ಲಿ ವಿವಿಧ ಆಟಿದ ಖಾದ್ಯಗಳು, ಆಟಿ ಕಲೆಂಜದ ವೇಷದಾರಿ ಬಾಲಕ ಭವಿಷ್ ನೃತ್ಯ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು