ಇತ್ತೀಚಿನ ಸುದ್ದಿ
ಸೀಡಿ ಹೋಯ್ತು, ಪೆನ್ ಡ್ರೈವ್ ಬಂತು!: ದಾಖಲೆ ಇದ್ದರೆ ಬಿಡುಗಡೆ ಮಾಡಲು ಏನು ಅಡ್ಡಿ?; ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಚೀಲದೊಳಗಿನ ಹಾವೇ?
06/07/2023, 19:42
ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ ಜಾತ್ಯತೀತ ಜನತಾ ದಳದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುಡುಗಿದ್ದಾರೆ. ಇಷ್ಟರವರೆಗೆ ರಾಜಕಾರಣಿಗಳು ಸೀಡಿ ಇಟ್ಡುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆ, ಇದೀಗ ಕುಮಾರಸ್ವಾಮಿ ಅವರು ಅಪ್ ಗ್ರೇಡ್ ಆಗಿ ಪೆನ್ ಡ್ರೈ ತೋರಿಸಿ ನೂತನ ಕಾಂಗ್ರೆಸ್ ಸರಕಾರದ ಜಾತಕ ಹೊರ ಹಾಕುವ ಬೆದರಿಕೆ ಹಾಕಿದ್ದಾರೆ.
ರಾಜ್ಯ ಸರಕಾರದ ವರ್ಗಾವಣೆ ದಂಧೆ ಕುರಿತು ದಾಖಲೆ ಇರುವ ಪೆನ್ ಡ್ರೈವ್ ತನ್ನಲ್ಲಿರುವುದಾಗಿ ಕುಮಾರಸ್ವಾಮಿ ಅವರು ಶರ್ಟ್ ಕಿಸೆಯಿಂದ ತೆಗೆದು ಮಾಧ್ಯಮದ ಕ್ಯಾಮೆರಾ ಮುಂದೆ ಪೆನ್ ಡ್ರೈವ್
ಹಿಡಿದಿದ್ದಾರೆ. ಇಂಧನ ಇಲಾಖೆಯಲ್ಲಿ ವರ್ಗಾವಣೆಯಾಗಿದೆ. 10 ಕೋಟಿ ರೂಪಾಯಿಗೆ ಬಿಕಾರಿಯಾಗಿದೆ. ಅವರ ಒಂದು ದಿನದ ದುಡಿಮೆ 50 ಲಕ್ಷ ರೂ. ನಗರಾಭಿವೃದ್ಧಿ ಇಲಾಖೆಯಲ್ಲಿಯೂ ವರ್ಗಾವಣೆ ದಂಧೆ ನಡೆದಿದೆ. ಸಿಎಂ ಕಚೇರಿಯಲ್ಲಿಯೂ ನಡೆದಿದೆ ಎಂದು ಆರೋಪಿಸಿದ್ದಾರೆ. ವರ್ಗಾವಣೆ ದಂಧೆಯ ಪೆನ್ ಡ್ರೈ ವ್ ಬಿಡುಗಡೆ ಮಾಡಿ ಎಂದು ಮಾಧ್ಯಮದ ಮಂದಿ ಕೇಳಿದಾಗ ಸಮಯ ಬಂದಾಗ ಅಂತ ಹೇಳಿದ್ದಾರೆ. ಹಾಗಾದರೆ ಸಮಯ ಯಾವಾಗ ಬರುತ್ತದೆ? ಅದಕ್ಕೆ ರಾಹು ಕಾಲ, ಗುಳಿಗ ಕಾಲ ನೋಡಲು ಇದೆಯೇ?
ಮಾಜಿ ಮುಖ್ಯಮಂತ್ರಿ ಹೇಳುವುದು ನಿಜವಾಗಿದ್ದರೆ, ನೂತನ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆಯುವುದರೊಳಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದೇ ಆದಲ್ಲಿ ತಪ್ಪಿತಸ್ಥರಿಗೆ
ಅಧಿಕಾರದಲ್ಲಿ ಉಳಿಯುವ ನೈತಿಕತೆ ಇಲ್ಲ. ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಗೆ ಸಿಗುವಂತೆ ಮಾಡಬೇಕು. ಅದು ಬಿಟ್ಟು, ಚೀಲದಲ್ಲಿ ಹಾವಿದೆ. ಈಗ ಬಿಡುತ್ತೇನೆ. ಮತ್ತೆ ಬಿಡುತ್ತೇನೆ ಅಂದ್ರೆ ಅದು ಹಿಟ್ ಆ್ಯಂಡ್ ರನ್ ಕೇಸ್ ಆಗುತ್ತೆ ಎನ್ನುವುದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು.














