1:09 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ: ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಸ್ವರ್ಣ, ಸೀತಾ ನದಿ; ಇನ್ನಾದಲ್ಲಿ 3 ಮನೆ ಜಲಾವೃತ

06/07/2023, 19:35

ಕಾರ್ಕಳ(reporterkarnataka.com): ಕಳೆದ 5 ದಿನಗಳಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದು, ಸ್ವರ್ಣ ಹಾಗೂ ಸೀತಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಪಶ್ಚಿಮಘಟ್ಟ ತಪ್ಪಲಿನಲ್ಲಿರುವ ಈ ತಾಲೂಕುಗಳಿಗೆ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ನೀರು ಮಾಳ ಮಲ್ಲಾರ್ ಬಳಿ ಸ್ವರ್ಣ ನದಿಗೆ ಭಾರಿ ಪ್ರಮಾಣದಲ್ಲಿ ಸೇರಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಡ್ಲಿ ಅಣೆಕಟ್ಟಿನ ಎಲ್ಲ ಗೇಟ್ ಗಳನ್ನು ತೆರೆಯಲಾಗಿದ್ದು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮುಂಡ್ಲಿ ಅಣೆಕಟ್ಟಿನ ಸುತ್ತಲೂ ಇರುವ ಗದ್ದೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಕೆರುವಾಶೆ, ಎಣ್ಣೆಹೊಳೆ ಹೆರ್ಮುಂಡೆಯ ಸ್ವರ್ಣ ನದಿಯ ತಟದ ಪ್ರದೇಶಗಳಲ್ಲಿ ನೀರು‌ ನುಗ್ಗಿದೆ.

ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿ ಅಪಾಯ ಮಟ್ಟದಲ್ಲಿ ಹರಿಯುತಿದೆ. ನಾಡ್ಪಾಲು ಬಳಿ ರಾಷ್ಟ್ರೀಯ ರಸ್ತೆಯಲ್ಲಿ ಸೀತಾ ನದಿಯ ನೀರು ಹರಿದಿದೆ. ಇದರಿಂದ ಸಂಚಾರ ದುಸ್ತರವಾಗಿದೆ.
ಶಿವಪುರ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿ
ದ್ದು ಬಟ್ರಾಡಿ, ದೊಡ್ಡಮನೆ ಭಾಗದಲ್ಲಿ ನೀರು ಕೃಷಿ ಭತ್ತದ ಗದ್ದೆಗಳಿಗೆ ಆವರಿಸಿದೆ .ಕಬ್ಬಿನಾಲೆ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು
ಧರ್ಮಸ್ಥಳ ಗ್ರಾಮ ಅಭಿವೃದ್ದಿಯ ಹಡಿಭೂಮಿ ಯೋಜನೆ ಯಲ್ಲಿ ವರಂಗದ ಮಾತಿಬೆಟ್ಟು ಸಮೀಪದಲ್ಲಿ ಇಪ್ಪತ್ತು ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿತ್ತು. ಆದರೆ ಕಬ್ಬಿನಾಲೆ ನದಿ ಪ್ರವಾಹದಿಂದ ನೆರೆ ಉಂಟಾಗಿ ಭತ್ತದ ಗದ್ದೆಗಳು ಮುಳುಗಿವೆ. ಇನ್ನಾ ಗ್ರಾಮದಲ್ಲಿ ಮೂರು ಮನೆಗಳು ಜಲಾವೃತವಾಗಿವೆ.
ಕಳೆದ ಎರಡು ವರ್ಷಗಳ ಹಿಂದೆ ಕಾಂಕ್ರಿಟಿಕರಣಗೊಂಡ ಕಬ್ಬಿನಾಲೆ- ತಿಂಗಳ ಮಕ್ಕಿ ಸಂಪರ್ಕಿಸುವ ರಸ್ತೆಯ ಪೊಲ್ಲಂತು ಎಂಬಲ್ಲಿ ಮಳೆಯಿಂದ ಮಣ್ಣಿನ ಸವಕಳಿಯಾಗಿ ರಸ್ತೆಗೆ ಕುಸಿತದ ಭೀತಿ ಉಂಟಾಗಿದೆ. ಸುಮಾರು ಎರಡು ಅಡಿ ಮಣ್ಣು ಕುಸಿದಿದ್ದು ರಸ್ತೆಯ ಎಡಪಾರ್ಶವು ಆಧಾರವಿಲ್ಲದಂತಾಗಿದೆ .
ಅಜೆಕಾರು- ಮಂಗಪಾಡಿ- ಭೂತಮಾರು ರಸ್ತೆಯ ಮರಬಿದ್ದು ತಡೆಗೋಡೆ ಕುಸಿತವಾಗಿದೆ.ಸ್ಥಳಕ್ಕೆ ಅಗಮಿಸಿದ ಅಜೆಕಾರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಸ್ಥಳಕ್ಕೆ ಆಗಮಿಸಿ ಮರವನ್ನು ಕತ್ತರಿಸಿ ತೆರವು ಗೊಳಿಸಿದರು
ಮಳೆ ವಿವರ : ಕಾರ್ಕಳ ತಾಲೂಕಿನಲ್ಲಿ ಬುಧವಾರ ಬಾರಿ ಮಳೆ ಸುರಿದಿದ್ದು ಕೆದಿಂಜೆ, 258.00ಮಿಮಿ
ಅತ್ಯಧಿಕ ಮಳೆ ದಾಖಲಾಗಿದೆ. ಸಾಣೂರು195.6 ಮಿಮೀ, ಇರುವತ್ತೂರು 213.2 ಮಿಮೀ, ,ಕಾರ್ಕಳ ನಗರ 247.6 ಮಿಮೀ ಕೆರುವಾಶೆ 196.4ಮಿಮಿ ,ಮುಳಿಕಾರಿನಲ್ಲಿ 209 ಮಿಮೀ, ಅಜೆಕಾರಿನಲ್ಲಿ 231.6 ಮಿಮೀ ಮಳೆಯಾಗಿದೆ.ಹೆಬ್ರಿ179 ಮಿಮೀ, ಕಾರ್ಕಳ ತಾಲೂಕಿನಲ್ಲಿ ಒಟ್ಟು 1551.6 ಮಿಮೀ ಮಳೆ ವರದಿಯಾಗಿದೆ. ಸರಾಸರಿ 221 ಮಿಮೀ ಮಳೆ ಬಿದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು