ಇತ್ತೀಚಿನ ಸುದ್ದಿ
ಪದವೀಧರರಿಗೆ ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವ ಚಿಂತನೆ ಇದೆ: ಸ್ಪೀಕರ್ ಯು.ಟಿ. ಖಾದರ್
29/06/2023, 23:26
ಮಂಗಳೂರು(reporterkarnataka.com): ಪದವಿ ಕಲಿತ ಆಸಕ್ತರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ತರಬೇತಿ ಕೇಂದ್ರಗಳು ಇಲ್ಲ, ಹಾಗಾಗಿ ರಾಜಕೀಯ ತರಬೇತಿ ಸಂಸ್ಥೆ ಪ್ರಾರಂಭಿಸುವ ಚಿಂತನೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು,
ರಾಜಕೀಯ ಶಿಕ್ಷಣ ಪಡೆದಲ್ಲಿ ರಾಜಕಾರಣಿಗಳ ಜತೆ ಕಾರ್ಯನಿರ್ವಹಿಸಬಹುದು. ಸರ್ಕಾರೇತರ ಎನ್ ಜಿಒ ಸಂಸ್ಥೆ ಪ್ರಾರಂಭಿಸಬಹುದು. ನಾವು ರಾಜಕೀಯ ಸೇರುವಾಗ ಇಂತಹ ಅವಕಾಶ ಇರಲಿಲ್ಲ ಎಂದರು.
ಜುಲೈ 3ರಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರು ಮಾತನಾಡಲಿದ್ದಾರೆ ಎಂದು ಸ್ಪೀಕರ್ ವಿವರ ನೀಡಿದರು.