2:33 PM Thursday16 - July 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಚಿಕ್ಕಮಗಳೂರಿನಲ್ಲಿ ಭಿನ್ನಮತೀಯರ ಸಭೆ; ಶಾಸಕಿ ನಯನಾ… ಬಿಎಂಟಿಸಿ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದ ಚಾಲಾಕಿ ಮಹಿಳೆ!: ನೋಡೋಕೆ ಸೈಲೆಂಟು, ಮಾಡಿದ… ಧರ್ಮಸ್ಥಳ ಪ್ರಕರಣ: ಎಸ್ ಐಟಿಯಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ

ಇತ್ತೀಚಿನ ಸುದ್ದಿ

ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಸಿಂಗೇರಿ ಆಯ್ಕೆ

15/06/2023, 14:09

ಬಂಟ್ವಾಳ(reporterkarnataka.com): ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿನ ಶಾಲಾಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಶ ಕೊರಗಪ್ಪ ನಾಯ್ಕ ಸಿಂಗೇರಿ ಅವಿರೋಧವಾಗಿ ಆಯ್ಕೆಯಾದರು.
3 ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂಜೀವ ಮೂಲ್ಯ ಮಜಿ ರವರ ಮಗನ ವಿದ್ಯಾಭ್ಯಾಸ ಮಜಿ ಶಾಲೆಯಲ್ಲಿ ಕೊನೆಗೊಂಡಿದ್ದರಿಂದ ಸರಕಾರದ ನಿಯಮದ ಪ್ರಕಾರ ಅಧ್ಯಕ್ಷ ಸ್ಥಾನ ತೆರವಾದ ಕಾರಣ ಹೊಸ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಜೀವ ಮೂಲ್ಯ ಅವರು ತಮ್ಮ ಅವಧಿಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಯನ್ನು ಶ್ರೀ ಮಾತಾ ಡವಲಪರ್ಸ್ ಸುರತ್ಕಲ್ ಇವರ ಮೂಲಕ ದತ್ತು ಪಡೆಯುವಂತೆ ಮಾಡಿ ದತ್ತು ಸಂಸ್ಥೆ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಊರ ಸಂಘ-ಸಂಸ್ಥೆ ಗಳ ಸಹಕಾರದೊಂದಿಗೆ ಶಾಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಶಾಲೆಯಲ್ಲಿ ಮಕ್ಕಳ ಗಣನೀಯ ಏರಿಕೆಗೆ ಕಾರಣರಾಗಿದ್ದರು.
ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಕೊರಗಪ್ಪ ನಾಯ್ಕ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಸ್ತುತ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಹಾಗೂ ಪಿಂಗಾರ ರೈತ ಉತ್ಪಾದಕರ ಸಂಘದ ನಿರ್ದೇಶಕರಾಗಿದ್ದು ಗ್ರಾಮ ಅಭಿವೃದ್ಧಿ ಯೋಜನೆಯ ವೀರಕಂಬ ಒಕ್ಕೂಟದ ನಿಕ್ಕಟಪೂರ್ವ ಅಧ್ಯಕ್ಷರಾಗಿದ್ದರು.
ನೂತನ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸಮಿತಿ ಎಲ್ಲಾ ಸದಸ್ಯರು ಹಾಗೂ ಕಾರ್ಯದರ್ಶಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು