1:24 AM Tuesday26 - May 2026
ಬ್ರೇಕಿಂಗ್ ನ್ಯೂಸ್
ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ?

ಇತ್ತೀಚಿನ ಸುದ್ದಿ

ಬೆಳಗಾವಿ ಭಾಗದ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ವಲಸೆ ಹೋಗದು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ

15/06/2023, 10:18

ರಾಹುಲ್ ಅಥಣಿ ಬೆಳಗಾವಿ

info.eporterkarnataka@gmail.com
ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ವಿದ್ಯುತ್ ಸಮಸ್ಯೆ ಇದೆ. ಬೆಲೆ ಏರಿಕೆಯ ಸಮಸ್ಯೆ ತಾತ್ಕಾಲಿಕ. ಅದನ್ನು ಪರಿಹರಿಸಲಾಗುವುದು.
ರಾಜ್ಯದ ಬೆಳಗಾವಿ ಭಾಗದ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಸಾಧ್ಯತೆಯನ್ನು ಕಡಿಮೆಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದರು.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ಬೆಳಗಾವಿ ಹಾಗೂ ಉತ್ತರ ಕರ್ನಾಟಕದಲ್ಲಿ ಮಳೆ ವಿಳಂಬವಾಗಿ ನೀರಿನ ಸಮಸ್ಯೆ ತಲೆದೋರಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಕೇಳಬೇಕೆ ಎಂಬ ಪ್ರಶ್ನೆಗೆ ಉದ್ಬವಿಸುವುದಿಲ್ಲ ಎನಿಸುತ್ತದೆ. ಏಕೆಂದರೆ ಮುಂದಿನ ವಾರದಲ್ಲಿ ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಆ ನಂತರ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.
ಹೆಚ್ಚಿದ ವಿದ್ಯುತ್ ಬಿಲ್ ನ್ನು ಯಾವ ಆಧಾರದಲ್ಲಿ ನೀಡಲಾಗುತ್ತಿದೆ ಎಂಬುದನ್ನೂ ಆಧರಿಸಿ ಮಾತನಾಡುತ್ತೇನೆ. ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಂಡಳಿಗಳು ವಿದ್ಯುತ್ ಬಿಲ್ ಹೆಚ್ಚಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಆಧಾರದಲ್ಲಿ ಬಿಲ್ ಗಳನ್ನು ಎರಡು-ಮೂರು ಪಟ್ಟು ಹೆಚ್ಚಿಸುತ್ತಿದ್ದಾರೆ ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ. ವಿದ್ಯುತ್ ಬೆಲೆ ಏರಿಕೆ ನಿಯಮಿತ ಪ್ರಕ್ರಿಯೆ. ವಿದ್ಯುತ್ ನಿಯಂತ್ರಣ ಆಯೋಗವು ಏಪ್ರಿಲ್ ನಲ್ಲಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಬಹುಶಃ ಚುನಾವಣೆಯ ಕಾರಣದಿಂದ ದರ ಏರಿಕೆ ತಕ್ಷಣಕ್ಕೆ ಜಾರಿಯಾಗಿರಲಿಲ್ಲ ಎಂದು ಅವರು ನುಡಿದರು.
ಸ್ತ್ರೀ ಶಕ್ತಿ ಯೋಜನೆಯಿಂದ ಸಾರಿಗೆ ಮಂಡಳಿಗಳು ಪ್ರಯೋಜನ ಪಡೆಯಲಿವೆ. ಸ್ತ್ರೀ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿದೆ. ಈ ಯೋಜನೆಯಿಂದ ರಾಜ್ಯದ ಸಾರಿಗೆ ಮಂಡಳಿಗಳಿಗೆ ಲಾಭವಾಗಲಿದೆ ಎಂದು ನಂಬಲಾಗಿದೆ. ಹೀಗಾದರೆ ಸಾರಿಗೆ ಮಂಡಳಿಗಳ ಸ್ಥಿತಿ ಸುಧಾರಿಸಿ ನೌಕರರ ವೇತನವನ್ನೂ ಹೆಚ್ಚಿಸಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು