ಇತ್ತೀಚಿನ ಸುದ್ದಿ
ಎನ್ ಎಸ್ ಯುಐ ಜಿಲ್ಲಾಧ್ಯಕ್ಷರಾಗಿ ಸುಹಾನ್ ಆಳ್ವ ಅಧಿಕಾರ ಸ್ವೀಕಾರ
02/06/2023, 14:31
ಮಂಗಳೂರು(reporterkarnataka.com): ಎನ್ ಎಸ್ ಯುಐ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದ ಸುಹಾನ್ ಆಳ್ವ ಅವರು ಗುರುವಾರವಾರ ಅಧಿಕಾರ ಸ್ವೀಕರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹರೀಶ್ ಕುಮಾರ್ ಅವರ ಸಮ್ಮುಖದಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಸುಹಾನ್ ಆಳ್ವ ಅವರು ಎನ್ ಎಸ್ ಯು ರಾಜ್ಯ ಪ್ರದಾನ ಕಾರ್ಯದರ್ಶಿ ಯಾಗಿ ತುಮಕೂರು, ಉತ್ತರಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಸ್ತುವಾರಿಯಾಗಿ ಸೇವೆ ಯನ್ನು ಸಲ್ಲಿಸಿರುತ್ತಾರೆ. ಎನ್ ಎಸ್ ಯುಐ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ವಿದ್ಯಾರ್ಥಿ ಕಾಂಗ್ರೆಸ್ ಮುಖಾಂತರ ವಿದ್ಯಾರ್ಥಿ ಶಕ್ತಿಯನ್ನು ಜಿಲ್ಲೆಯಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಕೆಲಸಕಾರ್ಯವನ್ನು ಮಾಡುತ್ತಾರೆ.