ಇತ್ತೀಚಿನ ಸುದ್ದಿ
ಆಡು ಮೇಯಿಸುವಾಗ ಸಿಡಿಲು ಬಡಿದು ಯುವಕ ದಾರುಣ ಸಾವು: ಮುಗಿಲು ಮುಟ್ಟಿದ ಕುಟುಂಬದ ಆಕ್ರಂಧನ
30/05/2023, 20:46
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿಯಲ್ಲಿ ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.ಆಡು ಮೇಯಿಸುತ್ತಿದ್ದಾಗ ಸಿಡಿಲು ಬಡಿದು
ಅಮೂಲ್ ಜಯಸಿಂಗ್ ಕಾನಡೆ (25) ಮೃತಪಟ್ಟಿದ್ದಾರೆ. ಅಥಣಿ ತಾಲೂಕಿನ ಕೋಹಳ್ಳಿ (ಕೆಸ್ಕರ ದಡ್ಡಿ) ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.