12:21 AM Thursday28 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ದುಬೈನಲ್ಲಿ ಪ್ರಥಮ ವರ್ಣರಂಜಿತ ಜಿಎಸ್ ಬಿ ವಿಶ್ವ ಅಂತಾರಾಷ್ಟ್ರೀಯ ಸಮ್ಮೇಳನ

25/05/2023, 21:57

ಮಂಗಳೂರು(reporterkarnataka.com): ಗಲ್ಫ್ ರಾಷ್ಟ್ರದಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ನಾಗರಿಕರಿಗಾಗಿಯೇ ದುಬೈನಲ್ಲಿ ಯೂತ್ ಆಫ್ ಜಿಎಸ್ ಬಿ ವಲ್ಡ್ ವೈಡ್ ಸಂಘಟನೆ ಆಯೋಜಿಸಿದ ಪ್ರಪ್ರಥಮ ಜಿಎಸ್ ಬಿ ಇಂಟರ್ ನ್ಯಾಷನಲ್ ಸಮ್ಮೇಳನ ಅರಬ್ ದೇಶದಲ್ಲಿರುವ ಜಿಎಸ್ ಬಿ ಬಾಂಧವರ ನಿರೀಕ್ಷೆ ಮೀರಿ ಯಶಸ್ಸನ್ನು‌ ಕಂಡಿತು.
ದುಬೈಯಲ್ಲಿರುವ ವಿಶ್ವಪ್ರಸಿದ್ಧ ಮ್ಯಾರಿಯೇಟ್ ಹೋಟೇಲ್ ನಲ್ಲಿ ವರ್ಣರಂಜಿತವಾಗಿ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ದುಬೈ, ಅಬುಧಾಬಿ, ಶಾರ್ಜಾ ಸಹಿತ ಯುನೈಟೆಡ್ ಅರಬ್ ಎಮಿರೇಟ್ ನ ವಿವಿಧ ಪ್ರದೇಶಗಳಿಂದ ಜಿಎಸ್ ಬಿ ಸಮಾಜದವರು ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಿದರು.

ಯುಎಇ ರಾಷ್ಟ್ರಗಳ ಸಮಾಜಮುಖಿ ಸಂಘಟನೆಗಳ ಸಹಕಾರದಿಂದ ನಡೆದ ಸಮ್ಮೇಳನ ಅಲ್ಲಿ ನೆಲೆಸಿರುವ ಅನಿವಾಸಿ ಜಿಎಸ್ ಬಿ ಬಾಂಧವರ ಬಹುಕಾಲದ ಕನಸನ್ನು ಈಡೇರಿಸಿ ಅವರಲ್ಲಿ ಸಂತೃಪ್ತಭಾವವನ್ನು ಮೂಡಿಸಿತು. ದಶಕಗಳ ಹಿಂದೆ ಅಲ್ಲಿ ಹೋಗಿ ನೆಲೆಸಿ, ವ್ಯವಹಾರ, ಉದ್ದಿಮೆ, ಉದ್ಯೋಗದಲ್ಲಿ ಉನ್ನತಿಯನ್ನು ಕಾಣುತ್ತಿರುವ ಅನಿವಾಸಿ ಭಾರತೀಯರು ಮತ್ತು ಅವರ ಮುಂದಿನ ಯುವ ತಲೆಮಾರನ್ನು ಸಾಂಸ್ಕೃತಿಕವಾಗಿ ಬೆಸೆಯುವ ಕಾರ್ಯಕ್ರಮದ ಅಂಗವಾಗಿ ನಡೆದ ಸಮ್ಮೇಳನದಲ್ಲಿ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿರುವ ಕಲೆಯನ್ನು ವೇದಿಕೆಯಲ್ಲಿ ನೃತ್ಯ, ಗಾನದ ಮೂಲಕ‌ ಅಲ್ಲಿನ ಸಂಘಟನೆಗಳ ಪ್ರಮುಖರು ಪ್ರದರ್ಶಿಸಿದರು.
ಅರಬ್ ದೇಶದಲ್ಲಿಯೂ ಸನಾತನ ಸಂಸ್ಕೃತಿಯನ್ನು ಉಳಿಸಿ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಾದರಿ ಕಾರ್ಯದಲ್ಲಿ ತೊಡಗಿಸಿಕೊಂಡು ಭಜನೆ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವ ಸಂಘಟನೆಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ದುಬೈಯಲ್ಲಿ ಯೂತ್ ಆಫ್ ಜಿಎಸ್ ಬಿ ಚಾನೆಲ್ ಇದರ ಸ್ಟುಡಿಯೋ ಆರಂಭಿಸುವ ಬಗ್ಗೆ ಸಮಾಜದ ಮುಂದಾಳುಗಳ ನೇತೃತ್ವದಲ್ಲಿ ನಿರ್ಧಾರಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಸಂಘಟಕರುಗಳಾದ ಅರುಣ್ ಪೈ, ಧೀರಜ್ ಪ್ರಭು, ಶ್ರೀನಾಥ್ ಪೈ, ಪ್ರದೀಪ್ ಶೆಣೈ, ಪ್ರಮುಖ ಪ್ರಾಯೋಜಕರಾದ ಆಭರಣ್ ಜ್ಯುವೆಲ್ಲರ್ ಬೆಂಗಳೂರು ಇದರ ಎಂಡಿ‌ ಪ್ರತಾಪ್ ಮಧುಕರ್ ಕಾಮತ್, ಪ್ರೀತಿ ಕಾಮತ್, ಡಿವಿಕೆ ಪ್ರವರ್ತಕರಾದ ವಾಸುದೇವ್ ಕಾಮತ್, ಖ್ಯಾತ ವೈದ್ಯ ಅನಂತ್ ಪೈ, ಹರೀಶ್ ಕಾಮತ್ ದುಬೈ, ಹರೀಶ್ ಶೆಣೈ ದುಬೈ, ಆನಂದ್ ಶಾನುಭೋಗ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಜಿಎಸ್ ಬಿ ಸಮುದಾಯದ ಆಹಾರ ಖಾದ್ಯಗಳನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಅತಿಥಿಗಳು ಅದನ್ನು ಸವಿದು ಸಂಘಟಕರನ್ನು ಶ್ಲಾಘಿಸಿದರು. ಮಂಗಳೂರಿನ ಖ್ಯಾತ ಆರ್ಕೆಸ್ಟ್ರಾ ತಂಡದಿಂದ ನಡೆದ ಹಿನ್ನಲೆ ಸಂಗೀತ ಮನಸಿಗೆ ಮುದ ನೀಡಿತು.
ಆಭರಣ್ ಜ್ಯುವೆಲ್ಲರ್ ಬೆಂಗಳೂರು, ದೀಪಕ್ ಭಾಸ್ಕರ್ ಶೆಣೈ ವಾಶಿ, ಮಂಗಲ್ಪಾಡಿ ರಾಜೇಶ್ ಶೆಣೈ, ಆರ್ಚ್ ಫಾರ್ಮ್ ಲ್ಯಾಬ್ಸ್ ಅಜಿತ್ ಕಾಮತ್ ಅವರು ಸಮ್ಮೇಳನದ ಪ್ರಾಯೋಜಕತ್ವವನ್ನು ವಹಿಸಿ ದುಬೈಯಲ್ಲಿ ನಡೆದ ಪ್ರಥಮ ಜಿಎಸ್ ಬಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಪ್ರೋತ್ಸಾಹಿಸಿದ್ದಾರೆ.
ಸ್ಥಳೀಯ ಜಿಎಸ್ ಬಿ ಪ್ರತಿಭೆಗಳು ಆಭರಣ್ ಜ್ಯುವೆಲ್ಲರ್ ಬೆಂಗಳೂರು ತಯಾರಿಸಿದ ವಿಶೇಷ ಆಭರಣಗಳನ್ನು ಧರಿಸಿ ಮಾರ್ಜಾಲ ನಡಿಗೆಯ ಮೂಲಕ ವ್ಯಾಪಕ ಕರತಾಂಡನದ ಮೆಚ್ಚುಗೆ ಗಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು