ಇತ್ತೀಚಿನ ಸುದ್ದಿ
ಮಂಗಳೂರು ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಕಂಕನಾಡಿ ಗರೋಡಿ ಕ್ಷೇತ್ರಕ್ಕೆ ಭೇಟಿ
05/05/2023, 23:20

ಮಂಗಳೂರು(reporterkarnataka.com): ನಗರದ ಕಂಕನಾಡಿ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಅವರು ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗರೋಡಿ ಶ್ರೀ ಬೈದರ್ಕಳ ಕ್ಷೇತ್ರದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಮಾಜಿ ಕಾರ್ಪೊರೇಟರ್ ಸಬಿತ ಮಿಸ್ಕಿತ್, ವಾರ್ಡ್ ಅಧ್ಯಕ್ಷ ಹೇಮಂತ್, ಭರತ್ ರಾಮ್, ಆಶಿತ್ ಪಿರೇರಾ, ಸತೀಶ್ ಪೆಂಗಲ್, ಮೊದಲಾದವರು ಉಪಸ್ಥಿತರಿದ್ದರು.