ಇತ್ತೀಚಿನ ಸುದ್ದಿ
ಬಿಜೆಪಿ ಕಡೆಗೆ ಸುಮಲತಾ ಒಲವು: ರಂಗ ಮಂದಿರದಿಂದ ಸಂಸದೆಯ ಫೋಟೋ ತೆರವು
13/03/2023, 23:11
ಸ್ವಪ್ನಾ ದಿನಕರ್ ಮದ್ದೂರು ಮಂಡ್ಯ
info.reporterkarnataka@gmail.com
ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಚಿತ್ರನಟಿ ಸುಮಲತಾ ಅಂಬರೀಶ್ ಅವರ ನಡೆ ಬಿಜೆಪಿ ಕಡೆ ತಿರುಗಿದ್ದು, ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ನಾಗಮಂಗಲದ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾ ಅವರ ಫೋಟೋ ತೆರವುಗೊಳಿಸಲಾಗಿದೆ.
ಸುಮಲತಾ ಅವರು ಬಿಜೆಪಿಗೆ ಅಧಿಕೃತವಾಗಿ ಸೇರದಿದ್ದರೂ ತಮ್ಮ ಸಂಪೂರ್ಣ ಬೆಂಬಲ ಎಂದಿಗೂ ಬಿಜೆಪಿಗೆ ಇರುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಇದು ಮಂಡ್ಯ ಜನತೆಗೆ ಆಘಾತ ಉಂಟು ಮಾಡಿದೆ. ಇದರ ಪ್ರತಿಧ್ವನಿ ಎನ್ನುವಂತೆ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾ ಅವರ ಫೋಟೋವನ್ನು ತೆಗೆಯಲಾಗಿದೆ.

ಅಂಬರೀಷ್ ಅವರು ಸಂಸದರಾಗಿದ್ದಾಗ ನೀಡಿದ್ದ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಲಾಗಿತ್ತು.
ಲಂಕೇಶ್ ಪತ್ರಿಕೆಯ ಅಂಕಣಕಾರರಾಗಿದ್ದ ಬಿ.ಚಂದ್ರೇಗೌಡ ಅವರು ಲಂಕೇಶ್ ಅವರ ಮೇಲಿನ ಅಭಿಮಾನದಿಂದ ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿದ್ದರು. ರಂಗಮಂದಿರದಲ್ಲಿ ವರನಟ ಡಾ. ರಾಜ್ಕುಮಾರ್, ನಟ ಅಂಬರೀಶ್ ಹಾಗೂ ಸುಮಲತಾರ ಫೋಟೋವನ್ನು ಅಳವಡಿಸಲಾಗಿತ್ತು. ಆದರೆ ಸುಮಲತಾ ಬಿಜೆಪಿಗೆ ಬೆಂಬಲ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಂಗಮಂದಿರದಲ್ಲಿದ್ದ ಸುಮಲತಾ ಫೋಟೋ ತೆರವುಗೊಳಿಸಿದ್ದಾರೆ.














