1:42 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಇದೇನು ಕೊರೊನಾ ಮೆರವಣಿಗೆಯೇ ?: ಸರಕಾರದ ಗೈಡ್ ಲೈನ್ಸ್ ಸಚಿವ ಲಿಂಬಾವಳಿ, ಶಾಸಕ ಸುನಿಲ್ ಗೆ ಅನ್ವಯಿಸುವುದಿಲ್ಲವೇ?

11/07/2021, 18:58

ಕಾರ್ಕಳ(reporterkarnataka news): ಒಂದು ಕಡೆ ಕೊರೊನಾ ಎರಡನೇ ಅಲೆಯ ಅರ್ಭಟ ಇನ್ನೂ ತಗ್ಗಿಲ್ಲ. ಇನ್ನೊಂದು ಕಡೆ ಮೂರನೇ ಅಲೆಯ ಭೀತಿ ಶುರುವಾಗಿದೆ. ಇವೆಲ್ಲದರ ನಡುವೆ ರಾಜಕೀಯ ಮೇಲಾಟ ಶುರುವಾಗಿದೆ. ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಎರಡೂ ಕೂಡ ಅಲ್ಲಲ್ಲಿ ಸಭೆ- ಸಮಾರಂಭ ಆಯೋಜಿಸುತ್ತಿವೆ. ಜನರು ಕೂಡ ಯಾವುದೇ ಭಯವಿಲ್ಲದೆ ಹುಚ್ಚೆದ್ದು ಸೇರುತ್ತಿದ್ದಾರೆ. ಇದಕ್ಕೊಂದು ಸಾಕ್ಷಿ ಕಾರ್ಕಳದ ಬಲ್ಲಿರಿ ಗ್ರಾಮದಲ್ಲಿ ನಡೆದ ಸಮಾರಂಭ.

ಮೊನ್ನೆ ಮೊನ್ನೆ ಮಂಗಳೂರು, ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ – ಸಂವಾದ ನಡೆಯಿತು. ಇಂದು ಮಂಗಳೂರು ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದಲ್ಲಿ ಗಾಜಿನ ಛಾವಣಿಯ ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ನಡೆಯಿತು. ಎಲ್ಲೂ ಸಾಮಾಜಿಕ ಅಂತರವಿರಲಿಲ್ಲ.


ಇದರ ಜತೆಗೆ ಕಾರ್ಕಳದ ನಲ್ಲೂರು ಗ್ರಾಮದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಭಾರಿ ಗೌಜಿ ಗಮತ್ತಿನ ಮೆರವಣಿಗೆ ನಡೆಯಿತು. ಪದ್ಮಶ್ರೀ ಸಾಲುಮರ ತಿಕ್ಕಮ್ಮ ವೃಕ್ಚ್ಯೋದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಇದಾಗಿತ್ತು. ಕೇರಳ ಶೈಲಿಯ ಚೆಂಡೆ, ಗೊಂಬೆ ಕುಣಿತದೊಂದಿಗೆ ಶಿಲಾನ್ಯಾಸ ನಡೆಯುವ ಸ್ಥಳಕ್ಕೆ ಸಚಿವ ಲಿಂಬಾವಳಿ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮುಂತಾದ ಗಣ್ಯರು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನವರ ಬಾಯಿಯಲ್ಲಿ ಮಾಸ್ಕ್ ಇರುವುದು ಬಿಟ್ಟರೆ ಸಾಮಾಜಿಕ ಅಂತರ ಎಲ್ಲೂ ಇರಲಿಲ್ಲ. ಸಚಿವರು, ಶಾಸಕರು, ಸಾರ್ವಜನಿಕರು ಹೆಗಲಿಗೆ ಹೆಗಲು ತಾಗಿಸಿಕೊಂಡಿಯೇ ಮೆರವಣಿಗೆಯಲ್ಲಿ ಸಾಗಿದರು. ರಾಜ್ಯ ಸರಕಾರದ ಗೈಡ್ಸ್ ಲೈನ್ ಪಾಲನೆ

ಸಚಿವ, ಶಾಸಕರಿಗೆ ಬೇಕಾಗಿಲ್ಲ. ಇವರಿಗೆ ಕೊರೊನಾದ ಭಯವಿಲ್ಲ. ಯಾಕೆಂದರೆ ಇವರದೆಲ್ಲ ಎರಡು ಡೋಸ್ ಲಸಿಕೆಯಾಗಿದೆ. ಇಮ್ಯುನಿಟಿ ಬೂಸ್ಟರ್ ಸೇವಿಸುತ್ತಾರೆ. ಅಗತ್ಯ ಬಿದ್ದರೆ ಆಕ್ಸಿಜನ್ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತದೆ.

ಆದರೆ ಬಡಪಾಯಿಗಳ ಗತಿ ಏನು? ನಾವೇ ಚಿಂತಿಸಿ, ಉತ್ತರ ಕಂಡುಕೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು