9:46 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ತಾಳ್ಮೆ, ಸಹನೆ ಇದ್ದರೆ ಮಾತ್ರ ನೇತಾರನಾಗಲು ಸಾಧ್ಯ: ಹೆಗಲಿಗೆ ಕೈಹಾಕಿದ ಅಭಿಮಾನಿಯ ತಲೆಗೆ ಬಾರಿಸಿದ ಕೆಪಿಸಿಸಿ ಅಧ್ಯಕ್ಷ ! 

10/07/2021, 13:15

ಮಂಡ್ಯ(reporterkarnataka news): ಸಾರ್ವಜನಿಕ ಜೀವನದಲ್ಲಿ ನಾಯಕರಿಗೆ ತಾಳ್ಮೆ, ಸಹನೆ ಎನ್ನುವುದು ಬಹಳ ಮುಖ್ಯ. ತಾಳ್ಮೆ ಇಲ್ಲದವರು ನಾಯಕನಾಗಲು ನಾಲಾಯಕು.  

ನಾಯಕ ಎಂದು ಕರೆಸಿಕೊಳ್ಳುವವರು ಅಭಿಮಾನಿಯೊಬ್ಬ ಹೆಗಲ ಮೇಲೆ ಕೈಹಾಕಿದಷ್ಟಕ್ಕೆ ತಲೆಗೆ ಹೊಡೆದು ಬಿಡುವುದೇ. ಇಂತಹ ಘಟನೆ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ನಡೆದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತನ್ನ ಅಭಿಯಾನಿಯ ತಲೆಗೆ ಫಟಾರ್ ಅಂತ ಹೊಡೆದು ಬಿಟ್ಟಿದ್ದಾರೆ. ಜತೆಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಶಿವಕುಮಾರ್ ಅವರು ಮಾಜಿ ಸಂಸದ ಮಾದೇ ಗೌಡ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದರು. ಡಿಕೆಶಿ ಅವರು ಮಾಮೂಲಿಯಾಗಿ ಯಾವಾಗಲೂ ಗರಂ ಆಗಿಯೇ ಇರುತ್ತಾರೆ. ಕೆ.ಎಂ.ದೊಡ್ಡಿಯಲ್ಲಿ ಮಾಮೂಲಿಗಿಂತಲೂ ಸ್ವಲ್ಪ ಜಾಸ್ತಿಯೇ ಗರಂ ಆಗಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಈ ಸಂದರ್ಭದಲ್ಲಿ ಶಿವಕುಮಾರ್ ಅವರ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಿದ್ದ ಅಭಿಮಾನಿಯೊಬ್ಬ ಅವರ ಹೆಗಲ ಮೇಲೆ ಕೈ ಹಾಕಲು ಯತ್ನಿಸಿದನಂತೆ. ಇದು ಅರಿವಿಗೆ ಬರುತ್ತಿದ್ದಂತೆ ಶಿವಕುಮಾರ್ ಅವರು ಅಭಿಮಾನಿಗಳು ತಲೆ ಮೇಲೆ ಹೊಡೆದೇ ಬಿಟ್ಟರು. ಜತೆಗೆ ‘ಕಾಮನ್ ಸೆನ್ಸ್ ನಿಂಗೆ ಇಲ್ವೇ… ಫ್ರಿಡಂ ಕೊಟ್ರೆ ಹೆಗಲ ಮೇಲೆ ಕೈ ಹಾಕುತ್ತೀಯ?’  ಎಂದು ಅಭಿಮಾನಿಯನ್ನು ದಬಾಯಿಸಿ ಬಿಟ್ರು. ಶಿವಕುಮಾರ್ ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸದ ಅಭಿಮಾನಿ ಪೆಚ್ಚಾಗಿ ಸ್ವಲ್ಪ ಮುಂದಕ್ಕೆ ಸರಿದು ಬಿಟ್ಟ.

ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಶಿವಕುಮಾರ್ ಅವರು ನಿರೀಕ್ಷಿಸಿದ್ದರೆ, ಈ ರೀತಿ ಪಟಲಾಂ ಕಟ್ಟಿಕೊಂಡು ರೈತ ನಾಯಕ, ಅತ್ಯಂತ ಸರಳ ವ್ಯಕ್ತಿಯಾದ ಮಾದೇಗೌಡ ಅವರನ್ನು ಕಾಣಲು ಬರುವ ಅಗತ್ಯವಿರಲಿಲ್ಲ ಎಂದು ಡಿಕೆಶಿ ವರ್ತನೆಯಿಂದ ನೊಂದ ನಾಗರಿಕರು ಅಭಿಪ್ರಾಯಪಡುತ್ತಾರೆ.

ಕೆನಡಾದಲ್ಲಿ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೇವ್ ಹಾಗೂ ನೆದರ್‌ಲ್ಯಾಂಡ್ ನಲ್ಲಿ ಪ್ರಧಾನಿ ಮಾರ್ಕ್ ರುಟಿ ಅವರ ಹೆಗಲಿಗೆ ಕೈ ಹಾಕಿ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ. ಅವರೆಂದೂ ತಮ್ಮ ಮರ್ಯಾದೆಗೆ ಚ್ಯುತಿಯಾಯಿತು ಅಂದುಕೊಳ್ಳುವುದಿಲ್ಲ. ಆದರೆ ನಮ್ಮ ದೇಶದಲ್ಲಿ ನಾವೇ ಬೆಳೆಸಿ ಆಯ್ಕೆ ಮಾಡಿ ಕಳುಹಿಸಿದ ರಾಜಕಾರಣಿಗಳಿಗೆ ಅಭಿಮಾನಿಯೊಬ್ಬ ಹೆಗಲ ಮೇಲೆ ಕೈ ಹಾಕಿದರೆ ಗೌರವಕ್ಕೆ ಚ್ಯುತಿ ಬರುತ್ತದೆ. ಶಿವಕುಮಾರ್ ಅವರೇ, ಇಂತಹ ಅಭಿಮಾನಿಗಳ ಮತಗಳಿಂದಲೇ  ನೀವು ಶಾಸಕರು, ಮಂತ್ರಿಯಾಗಿ ಈಗ ಕೆಪಿಸಿಸಿ ಅಧ್ಯಕ್ಷರಾಗಿರುವುದು ಎನ್ನುವುದು ನೆನಪಿರಲಿ.

ಇತ್ತೀಚಿನ ಸುದ್ದಿ

ಜಾಹೀರಾತು