7:36 PM Thursday16 - January 2025
ಬ್ರೇಕಿಂಗ್ ನ್ಯೂಸ್
ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ…

ಇತ್ತೀಚಿನ ಸುದ್ದಿ

ಹಿಂದೂ ಸಮಾಜಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅತ್ಯಮೂಲ್ಯ: ಶಾಸಕ ವೇದವ್ಯಾಸ ಕಾಮತ್

19/02/2023, 23:45

ಮಂಗಳೂರು(reporterkarnataka.com): ದೇಶ ಹಾಗೂ ಹಿಂದೂ ಸಮಾಜಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಬಣ್ಣಿಸಿದರು.

ಅವರು ಭಾನುವಾರ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಹಾಗೂ ಜಿಲ್ಲೆಯ ಆರ್ಯ ಯಾನೆ ಮರಾಠ ಸಮಾಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿಯವರ 396ನೇ ಜಯಂತಿಯಲ್ಲಿ ಮಾತನಾಡಿದರು.

ಹಿಂದೂ ಸಮಾಜ ಸಂಘಟಿತರಾಗಲು ಶಿವಾಜಿ ಮಹಾರಾಜರು ಆದರ್ಶ ಪ್ರಾಯವಾಗಿದ್ದಾರೆ, ಈ ಸಮಾಜ ಹಲವು ಸವಾಲು ಸಮಸ್ಯೆಗಳನ್ನು ಎದುರಿಸಿ ಎದ್ದು ಹೋರಾಟ ಮಾಡಲು ಶಿವಾಜಿ ಕಾರಣರು, ಅವರ ದೇಶಭಕ್ತಿ ಹಾಗೂ ಹಿಂದೂ ಸಮಾಜ ಉಳಿಸಿಕೊಳ್ಳುವ ಅವರ ಛಲಕ್ಕೆ ಅವರ ತಾಯಿ ಜೀಜಾಬಾಯಿ ನೀಡಿದ ವಿಶೇಷ ಪ್ರೇರಣೆಯು ಪ್ರಮುಖ ಕಾರಣ, ಆದ್ದರಿಂದ ಅವರು ಪೂಜನೀಯ ಸ್ಥಾನದಲ್ಲಿದ್ದಾರೆ ಅವರು ತಮ್ಮ ಕಾಲಘಟ್ಟದಲ್ಲಿ ಹಿಂದೂ ಸಮಾಜವನ್ನು ಒಟ್ಟಾಗಿ ಸೇರಿಸುವ ಕೆಲಸ ಮಾಡಿದರು ಎಂದು ಹೇಳಿದರು.

ನಗರದ ಪಂಪ್ ವೆಲ್ ಮೇಲ್ಸೆತುವೆಯ ಹತ್ತಿರದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮರಾಠ ಪರಿಷತ್ ಹಾಗೂ ಸರ್ಕಾರದ ಸಹಯೋಗದಲ್ಲಿ ನಿರ್ಮಿಸಲು ಚಿಂತಿಸಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮೇಯರ್, ಉಪ ಮೇಯರ್ ಹಾಗೂ ಮರಾಠ ಸಮಾಜದ ಮುಖಂಡರೊಂದಿಗೆ ಸಭೆ ಮಾಡಲಾಗಿದೆ, ಸ್ಥಳವನ್ನು ಅಂತಿಮಗೊಳಿಸಿ, ಚುನಾವಣೆಗೂ ಮುನ್ನ ಶಿಲನ್ಯಾಸ ನೆರವೇರಿಸುವುದಾಗಿ ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕುದ್ರೋಳಿಯ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಈ ದೇಶ ಶಿವಾಜಿಯನ್ನು ಮರೆಯಲು ಸಾಧ್ಯವಿಲ್ಲ, ದೇಶದ ಚರಿತ್ರೆಯು ಶಿವಾಜಿಯನ್ನು ಮರೆಯುವಂತಿಲ್ಲ ಶಿವಾಜಿ ವ್ಯಕ್ತಿಯಲ್ಲ ಆ ಕಾಲಮಾನಕ್ಕೆ ಹುಟ್ಟಿ ಬಂದ ಅವತಾರ. 1674ರಲ್ಲಿ ಶಿವಾಜಿಯವರ ಪಟ್ಟಾಭಿಷೇಕವಾಯಿತು, ಅಂದು ಅವರು ಸ್ಥಾಪಿಸಿದ ಸ್ವರಾಜ್ಯ ತಾಯಿ ಜೀಜಾಬಾಯಿಯ ಮಡಿಲಿನಲ್ಲಿ ತಮ್ಮ ಎಳವೆಯಿಂದ ಕಲಿತ ಹಿಂದೂ ಸಂಸ್ಕೃತಿಯ ಸಾಕಾರ ಕಲ್ಪನೆ, ಮೂಲತಃ ಸ್ನೇಹಜೀವಿ ಶಿವಾಜಿಯವರ ಚಿಂತನೆಗಳ ಫಲ ಕ್ರಿ.ಶ. 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಇಡೀ ದಕ್ಷಿಣ ಭಾರತವನ್ನು ಹೆದರಿಸಿದ್ದ ಅಫ್ಜಲ್ ಖಾನ್ ನನ್ನು ಚಾಣಾಕ್ಷತೆಯಿಂದ ಕುಂದುಹಾಕಿದ್ದು ಶಿವಾಜಿ ಎಂದು ಹೇಳಿದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷ ಸುರೇಶ್ ರಾವ್, ಮಂಗಳೂರು ಆರ್ಯ ಯಾನೆ ಮರಾಠ ಸಮಾಜದ ಸಂಘದ ಅಧ್ಯಕ್ಷ ವಾಮನ್ ವಾಗ್ಮನ್ ಮುಳ್ಳಂಗೋಡು ಶುಭಹಾರೈಸಿದರು. ಇತರೆ ಗಣ್ಯರು ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಶ್ರೀಮತಿ ಬಬಿತಾ ನಿರೂಪಿಸಿದರು. ಶಿವಾಜಿ ಅಭಿಮಾನಿಗಳು, ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇತ್ತೀಚಿನ ಸುದ್ದಿ

ಜಾಹೀರಾತು