ಇತ್ತೀಚಿನ ಸುದ್ದಿ
ಫುಡ್ ಫ್ಯಾಕ್ಟರಿಗೆ ಬೆಂಕಿ : ಸಾವಿಗೀಡಾದವರ ಸಂಖ್ಯೆ 52ಕ್ಕೆ ಏರಿಕೆ
09/07/2021, 19:00

ಢಾಕಾ(Reporterkarnataka news)
ಬಾಂಗ್ಲಾದೇಶದ ಫುಡ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವಿಗೀಡಾದವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.
ಪೊಲೀಸರು ಶುಕ್ರವಾರ ಹೇಳಿಕೆ ನೀಡಿದ್ದು, ಢಾಕಾದ ರೂಪಗಂಜ್‌ನ ಹಾಶೆಮ್ ಫುಡ್ ಆ್ಯಂಡ್ ಬಿವರೇಜ್ ಫ್ಯಾಕ್ಟರಿಯಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ಸುಮಾರು 24 ಗಂಟೆ ಕಳೆದರೂ ಬೆಂಕಿ ಉರಿಯುತ್ತಿತ್ತು ಎನ್ನಲಾಗಿದೆ.
ಬೆಂಕಿ ಆರನೇ ಅಂತಸ್ತಿಗೆ ತಲುಪಿದ್ದರಿಂದ ಭಯಭೀತಗೊಂಡು ಕಟ್ಟಡದಿಂದ ಹಾರಿದ್ದ 30ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯಗಳಾಗಿವೆ.
ಅಗ್ನಿಶಾಮಕ ಸಿಬ್ಬಂದಿ ಈವರೆಗೆ 25 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.