12:40 AM Sunday28 - June 2026
ಬ್ರೇಕಿಂಗ್ ನ್ಯೂಸ್
2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ತಿರುವೈಲುನಲ್ಲಿ ಸಂಭ್ರಮದ ಕಂಬಳ ಉತ್ಸವ: ಕರಾವಳಿಯ ಜನಪದ ಕ್ರೀಡೆಗೆ ಮತ್ತಷ್ಟು ರಂಗು!

13/02/2023, 15:13

ಮಂಗಳೂರು(reporterkarnataka.com):
ನಗರದ ಹೊರವಲಯದ ವಾಮಂಜೂರಿನ ತಿರುವೈಲು ಶ್ರೀ ಅಮೃತೇಶ್ವರ ದೇವಳದ ಎದುರಿನ ತಿರುವೈಲುಗುತ್ತಿನಲ್ಲಿ ಕಳೆದ ಶನಿವಾರ ಸಂಕು ಪೂಂಜ-ದೇವು ಪೂಂಜ ಜೋಡುಕೆರೆ ಕಂಬಳ ಟ್ರಸ್ಟ್ ವತಿಯಿಂದ ಕಂಬಳ ಉತ್ಸವ ನಡೆಯಿತು.




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿ.ಆರ್.ಮಡಿಕಲ್ ಕಾಲೇಜಿನ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್, ಕರಾವಳಿಯ ದೇವಾರಾಧನೆ, ದೈವಾರಾಧನೆ, ಕಂಗೆ ಕರೆ ಸಂಸ್ಕೃತಿ ಎಲ್ಲವೂ ಪ್ರಕೃತಿಗೆ ಬಂದಿದೆ. ಇವೆಲ್ಲ ಮುಂದಿನ ದಿನಗಳಲ್ಲೂ ಮುಂದುವರಿಯಬೇಕಾದರೆ, ಮರ-ಗಿಡಗಳನ್ನು ಉಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಗ್ರಾಮೀಣ ಜನರು ಸ್ವಾಭಾವಿಕ, ಪ್ರಕೃತಿಯೊಂದಿಗೆ ಬದುಕುವ ಕಲೆಯಿಂದ ಇಂದು ರೋಗ ರುಜಿನಗಳಿಂದ ದೂರು ಇದ್ದಾರೆ. ಅವರು ಹಾಕಿಕೊಟ್ಟ ಸಂಸ್ಕಾರ, ವ್ಯವಸ್ಥೆಯ ಅಡಿಯಲ್ಲಿ ನಾವು ಬದುಕಬೇಕು. ನಮ್ಮ ಕಲೆ ಸಂಸ್ಕೃತಿಯನ್ನು ಉಳು, ಮುದಿ ತಲೆದೋರಿಗೆ ದಾಟಿಸುವ ಕೆಲಸ ಮಾಡಬೇಕು. ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಂಬಳದಂತಹ ಜಾನಪದ ಕ್ರೀಡ ಅನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ತಿರುವಲು ಗುತ್ತು ಕ ಜನಾಕರ್ಷಣೆಯೊಂದಿಗೆ ಹೊಸ ನಮೂನೆಯೊಂದಿಗೆ ಪ್ರತಿ ವರ್ಷ ನಡೆಯುತ್ತದೆ‌. ಇನ್ನೇನು ಕಂಬಳ ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ನ್ಯಾಯಲಯಕ್ಕೆ ಮನವರಿಕೆಯಾಗಿ ಕಂಬಳ ಮತ್ತೆ ಆರಂಭವಾಯಿತು. ಇನ್ನಷ್ಟು ಕಾಲ ಕಂಬಳ ಮುಂದುವರಿಯಲಿ ಎಂದರು.



ಟಿವಿಎಸ್ ಮೋಟಾರ್ ಕಂಪೆನಿ ಉಪಾಧ್ಯಕ್ಷ ರಾಹುಲ್‌ ನಾಯ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮತ್ತ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್ ರೈ ಮಾಲಾಡಿ, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ, ಅರಸು ಮುಂಡಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲ ಕೃಷ್ಣ ಭಂಡಾರಿ, ಪ್ರಮುಖರಾದ ಕಿಶೋರ್ ನಾಯ್ಕ, ಪದ್ಮರಾಜ್ ಆರ್‌. , ಸಂತೋಷ್ ಶೆಟ್ಟಿ, ಪಟ್ಟ ಪವನ್‌ ಕುಮಾರ್‌, ಓಂ ಪ್ರಕಾಶ್ ಶೆಟ್ಟಿ ಗಣೇಶ್ ಶೆಟ್ಟಿ ಜಪ್ಪು ಗುಡ್ಡೆಗುತ್ತು, ಸೀತಾರಾಮ ಜಾಣು ಶೆಟ್ಟಿ ಸದಾಶಿವ ಭಟ್, ಪ್ರಚೋಷ ಮಲ್ಲಿ ಉಮೇಶ್ ರೈ, ಗಿರಿಧರ ಶೆಟ್ಟಿ, ಗ್ರಾಪಂ ಸದಸ್ಯೆ ಸುಮಲತಾ, ಸುರೇಶ್ ಶೆಟ್ಟಿ ಕಾಪೆಟ್ಟುಗುತ್ತು, ಸನತ್ ಕುಮಾರ್ ರೈ ನಡು ಚಂದ್ರಶೇಖರ ಶೆಟ್ಟಿ ಕಾಪೆಟ್ಟುಗುತ್ತು, ಬಾಲಕೃಷ್ಣ ಭಂಡಾರಿ ಲಿಂಗಮಾರುಗುತ್ತು, ಚಂದ್ರಹಾಸ ಶೆಟ್ಟಿ ಬಾಳಿಕೆ ಮನೆ, ನವಿಲ್ ಕಟ್ಟಿಸತ ಬೆಟ್ಟು ಗಂಗಯ್ಯ ಅಮೀನ್, ನವೀನ್ ಚೌಟ, ಸಂದೀಪ್ ಶೆಟ್ಟಿ, ಬಾಲಕೃಷ್ಣ ಕೊಟ್ಟಾರಿ, ಚಂದ್ರಹಾಸ ರೈ, ಕಂಬಳ ಸಮಿತಿ ಅಧ್ಯಕ್ಷ ನವೀನ್‌ ಚಂದ್ರ ಆಳ್ವ, ಗೌರವಾಧ್ಯಕ್ಷ ವಿಥುನ್‌ ರೈ, ಕಾರ್ಯಾಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವ ಕೋಲಾಧಿಕಾರಿ ಧನರಾಜ್‌ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ, ಕೆ.ಅಭಿಷೇಕ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು