ಇತ್ತೀಚಿನ ಸುದ್ದಿ
ಬೆಳ್ತಂಗಡಿಯ ಗಡಾಯಿಕಲ್ಲು ಏರಿ ಕನ್ನಡ ಧ್ವಜ ಹಾರಿಸಿದ ಕೋತಿರಾಜ್: ಮೆಟ್ಟಿಲುಗಳ ಸಹಾಯವಿಲ್ಲದೆ 1700 ಅಡಿಯೇರಿದ ಮಂಕಿಮ್ಯಾನ್!
12/02/2023, 23:29

ಬೆಳ್ತಂಗಡಿ(reporterkarnataka.com):
ಎತ್ತರದ ಕಟ್ಟಡ, ಐತಿಹಾಸಿಕ ಕೋಟೆ, ಪರ್ವತವನ್ನು ಸರಸರನೆ ಏರುವ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಗಡಾಯಿಕಲ್ಲನ್ನು ಯಾವುದೇ ಮೆಟ್ಟಿಲುಗಳ ಸಹಾಯವಿಲ್ಲದೆ ಸರಸರನೆ ಏರಿ ದಾಖಲೆ ನಿರ್ಮಿಸಿದ್ದಾರೆ.
ಕೋತಿ ರಾಜ್ ಅವರು ಭಾನುವಾರ 1700 ಅಡಿ ಎತ್ತರದ ಬೆಳ್ತಂಗಡಿಯ ಗಡಾಯಿಕಲ್ಲನ್ನು ಯಾವುದೇ ಮೆಟ್ಟಿಲುಗಳ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಹತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 2 ತಾಸಿನಲ್ಲಿ ಅವರು ಗಡಾಯಿಕಲ್ಲಿನ ತುತ್ತ ತುದಿಯನ್ನೇರಿದ್ದಾರೆ. ಅಷ್ಟೇ ಅಲ್ಲದೆ ಗಡಾಯಿಕಲ್ಲಿನ ಮೇಲೆ ಕನ್ನಡ ಧ್ವಜವನ್ನು ಹಾರಿಸಿದ್ದಾರೆ.
ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ
ಗಡಾಯಿಕಲ್ಲನ್ನು ಮೊದಲ ಬಾರಿಗೆ ಕೋತಿರಾಜ್ ಏರಿದ್ದಾರೆ. ಏರುವ ಮುನ್ನ ಸಮೀಪ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ತೆಂಗಿನ ಕಾಯಿ ಒಡೆದಿದ್ದಾರೆ. 11.50 ರ ಸುಮಾರಿಗೆ ಗಡಾಯಿಕಲ್ಲು ತುತ್ತ ತುದಿ ಮುಟ್ಟುವಲ್ಲಿ ಅವರು ಯಶಸ್ವಿಯಾಗಿದ್ದಾರೆ.