2:25 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ತಾತ್ಸಾರದ ನುಡಿ: ಸಂಬಂಧಿಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ; 18 ಸಾವಿರ ರೂ. ದಂಡ

10/02/2023, 00:32

ರಾಹುಲ್ ಅಥಣಿ ಬೆಳಗಾವಿ

info.reporterkarnataka agnail.com

ಗ್ರಾಮಸ್ಥರ ಹಾಗೂ ಕುಟುಂಬಸ್ಥರ ತಾತ್ಸಾರದ ಮಾತುಗಳನ್ನು ಕೇಳಿ ಸಹೋದರನ್ನು ಕೊಲೆ ಮಾಡಿರುವ ಆರೋಪಿಗೆ ಚಿಕ್ಕೋಡಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಸಂಬಂಧದಲ್ಲಿ ಸಹೋದರಾಗುವ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗೆ ಚಿಕ್ಕೋಡಿ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 18 ಸಾವಿರ ರೂ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಆರೋಪಿ ಭೀಮಣ್ಣಾ ಭರಮು ಚಿಪ್ಪರಗಿ ಇತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ 2007 ರಂದು ಅಣ್ಣಪ್ಪ ನೇಮಣ್ಣಾ ಚಿಪ್ಪರಗಿ ಕೊಲೆಯಾದ ವ್ಯಕ್ತಿ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನ ಗ್ಲಾಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಚಿಪ್ಪರಗಿ ಕಾರ್ಖಾನೆ ಬಂದ್ ಆದ ಬಳಿಕ ಗುಜರಾತಕ್ಕೆ ಹೋಗಿ ಕೆಲಸ ನಿರ್ವಹಿಸುತ್ತಿದ್ದ. ಒಮ್ಮೆ ಊರಿಗೆ ಬಂದಾಗ ಅರೋಪಿ ಭೀಮಣ್ಣಾ ನನಗೂ ಕೆಲಸ ಕೊಡಿಸು ಅಂತ ಕೇಳಿಕೊಂಡಾಗ ಅಣ್ಣಪ್ಪ ಆರೋಪಿಯನ್ನು ಗುಜರಾತಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದ. ಆದರೆ ಬಹಳ ದಿನ ಕೆಲಸ ಮಾಡದೇ ಮರಳಿ ಊರಿಗೆ ಬಂದ ಆರೋಪಿಗೆ ಮನೆಯವರು ತಾತ್ಸಾರ ಮನೋಭಾವ ತೋರುತ್ತಿದ್ದರು. ನೋಡು ಅಣ್ಣಪ್ಪ ಕಾರ್ಖಾನೆಯಲ್ಲಿ ಕೆಲಸ ಮಾಡಿ ಮನೆ ಕಟ್ಟಿಸಿಕೊಂಡ ನೀನೆನು ಮಾಡುತ್ತೀಯಾ ಊರಲ್ಲಿ ಒಕ್ಕಲುತನ ಮಾಡುತ್ತೀಯಾ ಅಂತ ಹೇಳಿದಾಗ ಕೋಪಗೊಂಡ ಆರೋಪಿಯು ಅಣ್ಣಪ್ಪನನ್ನು ಕೊಲೆ ಮಾಡಿರುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 7 ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಆರೋಪಿತನಿಗೆ ಜೀವಾವಧಿ ಶಿಕ್ಣೆ ಹಾಗೂ 18 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ವೈ.ಬಿ.ತುಂಗಳ ವಾದ ಮಂಡಿಸಿದರು.ಪ್ರಕರಣದ ತನಿಖೆ ಮಾಡಿ ಅಥಣಿ ಸಿಪಿಐ ಶೇಖರೆಪ್ಪ ಎಚ್.ಅವರು ಆರೋಪಿ ಮೇಲೆ ದೋಷಾರೋಪಣೆ ಸಲ್ಲಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು