11:00 AM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಕುಲಪತಿ ಹುದ್ದೆಗೆ ಲಂಚ: ಪ್ರಾಧ್ಯಾಪಕ ಮೇಲಿನ ಪ್ರಕರಣವನ್ನು ಮುಚ್ಚಿ ಹಾಕಿದ ಮಂಗಳೂರು ವಿವಿ!; ಪ್ರಭಾವಿಗಳ ಒತ್ತಡ ಕಾರಣ?

09/02/2023, 21:05

ಮಂಗಳೂರು(reporterkarnataka.com): ಕುಲಪತಿ ಹುದ್ದೆಗಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಲಂಚ ಕೊಟ್ಟ ಪ್ರಕರಣವನ್ನು ವಿವಿ ಆಡಳಿತ ಮುಚ್ಚಿ ಹಾಕಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಾಧ್ಯಾಪಕನ ವಿರುದ್ದ ಕ್ರಮ ಕೈಗೊಳ್ಳದೇ ಇತ್ಯರ್ಥ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು ವಿವಿ ಪ್ರಾಧ್ಯಾಪಕ ಜಯಶಂಕರ್ ಅವರು ರಾಯಚೂರು ವಿವಿ ಕುಲಪತಿ ಹುದ್ದೆ ಪಡೆಯಲು ಲಂಚ ಕೊಟ್ಟಿದ್ದರು. ಮಂಗಳೂರು ವಿವಿ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಅವರು 16 ಲಕ್ಷ ಲಂಚ ಕೊಟ್ಟರೂ ಕುಲಪತಿ ಹುದ್ದೆ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು, ಈ ಮಧ್ಯೆ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ್ದ ಜಯಶಂಕರ್ ಗೆ ಮಂಗಳೂರು ವಿವಿ ಸಿಂಡಿಕೇಟ್ ನೋಟೀಸ್ ನೀಡಿತ್ತು. 2021ರ ಏ.9 ರ ಸಿಂಡಿಕೇಟ್ ಸಭೆಯಲ್ಲಿ ಜಯಶಂಕರ್ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ನೀಡಿದ್ದರು.

ನಿವೃತ್ತ ಜಿಲ್ಲಾ ಜಡ್ಜ್ ಬೈಲೂರು ಶಂಕರ ರಾಮ ಸಮಿತಿ ಈ ಕುರಿತು ತನಿಖೆ ನಡೆಸಿ 2022ರ ಜೂನ್ 1ರಂದು ತನಿಖಾ ವರದಿ ಸಲ್ಲಿಸಿತ್ತು. ತನಿಖೆಯಲ್ಲಿ ಜಯಶಂಕರ್ ಅವರು ಕುಲಪತಿ ಹುದ್ದೆಗೆ ಲಂಚ ಕೊಟ್ಟಿರುವುದು ದೃಢಪಟ್ಟಿತ್ತು.
ಕುಲಪತಿ ಹುದ್ದೆ ಪಡೆಯಲು ನ್ಯಾಯೋಚಿತವಲ್ಲದ ದಾರಿಯಲ್ಲಿ ಹಣ ನೀಡಿದ್ದು ಸರಿಯಲ್ಲ. ಮಂಗಳೂರು ವಿವಿಯ ಹೆಸರು, ಘನತೆ, ಪ್ರತಿಷ್ಠೆ ಕೆಳಮಟ್ಟಕ್ಕೆ ಇಳಿದಂತಾಗಿದೆ. ಮಂಗಳೂರು ವಿವಿ ಉದ್ಯೋಗಿಗಳ ಸೇವಾ ನಡತೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಆದರೆ ಮಂಗಳೂರು ವಿಶ್ವ ವಿದ್ಯಾನಿಲಯ ಜಯಶಂಕರ್ ಹಣ ನೀಡಿರುವುದು ದೃಢಪಟ್ಟರೂ ಪ್ರಾಧ್ಯಾಪಕ ಜಯಶಂಕರ್ ಗೆ ತಿಳುವಳಿಗೆ ಪತ್ರ ನೀಡಿ ಪ್ರಕರಣ ಇತ್ಯರ್ಥಗೊಳಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು