ಇತ್ತೀಚಿನ ಸುದ್ದಿ
ಬೆಂಗಳೂರು ನಗರದಲ್ಲಿ ಆರೋಗ್ಯ,ಶಿಕ್ಷಣ ಜತೆಗೆ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ: ಮುಖ್ಯಮಂತ್ರಿ ಬೊಮ್ಮಾಯಿ
07/02/2023, 21:36

ಬೆಂಗಳೂರು(reporterkarnataka.com): ಬೆಂಗಳೂರು ನಗರದಲ್ಲಿ ಆರೋಗ್ಯ ಸೇವೆ, ಶಿಕ್ಷಣ, ರಸ್ತೆಗಳ ನಿರ್ಮಾಣ ಇವುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದ ಜತೆ ಮಾತನಾಡಿದ ಅವರು,ಜನಸಾಮಾನ್ಯರಿಗೆ ಇತ್ತೀಚೆಗೆ ದುರ್ಲಭವೆನಿಸುತ್ತಿರುವ ವೈದ್ಯಕೀಯ ಸಲಹೆಯ ಕೊರತೆಯನ್ನು ನೀಗಿಸಲು ನಮ್ಮ ಕ್ಲಿನಿಕ್ ಕೇಂದ್ರಗಳನ್ನು ತೆರೆಯಲಾಗಿದೆ.
ಇಲ್ಲಿ ಆರೋಗ್ಯ ತಪಾಸಣೆ, ಔಷಧಿ ಸೇವೆಗಳು ಲಭ್ಯವಾಗಲಿವೆ. ಜನಸಾಮಾನ್ಯರ ಆರೋಗ್ಯ ಸ್ಘಿತಿಯನ್ನು ಉತ್ತಮಪಡೆಸಲು ನಮ್ಮ ಕ್ಲಿನಿಕ್ ತೆರೆಯಲಾಗಿದೆ ಎಂದು ಅವರು ನುಡಿದರು.
ಆರೋಗ್ಯ ಸಚಿವ ಡಾ. ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.