ಇತ್ತೀಚಿನ ಸುದ್ದಿ
3 ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ: ಮೂಡಿಗೆರೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
05/02/2023, 16:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ. ಈ ಬಾರಿ ಬಹಳ ತಾಳ್ಮೆಯಿಂದ ಎಲೆಕ್ಷನ್ ಮಾಡ್ಬೇಕು ಅನ್ಕೊಂಡಿದ್ದೀನಿ ಎಂದು ಸಿಡಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮೂಡಿಗೆರೆ ತಾಲೂಕಿನ ಹಾಂದಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಹೆಬ್ಬಾಳ್ಕರ್, ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮಾಧ್ಯಮದವರಿಗೆ ವಿನಂತಿ ಕೂಡ ಮಾಡಿದ್ದೇನೆ ಎಂದರು.
ಮೂರು ತಿಂಗಳು ತಾಳ್ಮೆಯಿಂದ ನಾನು ಮಾಡಿದ ಕೆಲಸದಿಂದ ಗೆಲ್ಲಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನ ಅಧಿಕಾರಕ್ಕೆ ತರಬೇಕಿದೆ.
ಮಹಿಳೆಯರ ಪರವಾದ ಸರ್ಕಾರವನ್ನ ನಾವು ರೂಪಿಸಬೇಕಿದೆ. ನಾನು ತುಂಬಾ ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ಅವರು ನುಡಿದರು.
ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ನೋಡೂ ಇಲ್ಲ. ಕುಮಾರಸ್ವಾಮಿ ಅಣ್ಣನ ಬಗ್ಗೆ ತುಂಬಾ ಗೌರವ ಇದೆ. ಅವರು ಯಾವ ಮೂಲದಿಂದ ಹೇಳಿದ್ದಾರೆ ಗೊತ್ತಿಲ್ಲ, ಅದಕ್ಕೆ ನಾನು ಪ್ರತಿಕ್ರಿಯೇ ನೀಡೋದು ಸರಿಯಲ್ಲ ಎಂದರು.