ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ಫೆ.6ರಂದು ರಾಜ್ಯಕ್ಕೆ: ಫೆಬ್ರವರಿಯಲ್ಲಿ 4 ಬಾರಿ ಭೇಟಿ ನೀಡಲಿರುವ ಪಿಎಂ
31/01/2023, 21:02

ಮಂಗಳೂರು(reporterkarnataka.com): ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆ.6ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಫೆವ್ರವರಿಯಲ್ಲಿ ಅವರು 4 ಬಾರಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಚಿಕ್ಕಬಳ್ಳಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನ
ಉದ್ಘಾಟನೆಯಲ್ಲೂ ಪ್ರಧಾನಿ ಭಾಗಿಯಾಗಲಿದ್ದಾರೆ. ಫೆಬ್ರವರಿಯಲ್ಲಿ ಇದು ನಡೆಯಲಿದೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆಗೂ ಫೆಬ್ರವರಿ
2ನೇ ವಾರದಲ್ಲಿ ಭೇಟಿ ನೀಡುವ ಮೋದಿ ಅವರು ಫೆಬ್ರವರಿ ಕೊನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಲ್ಲೂ ಪಾಲ್ಗೊಳ್ಳಲಿದ್ದಾರೆ
ಎಂದು ತಿಳಿದು ಬಂದಿದೆ.
ಕಳೆದ ತಿಂಗಳಲ್ಲಿ ರಾಜ್ಯಕ್ಕೆ 3 ಬಾರಿ ಪ್ರಧಾನಿ ಮೋದಿ
ಭೇಟಿ ನೀಡಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ಹಾಗೂ ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸಿದ್ದರು.