5:45 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಣೆ

06/07/2021, 16:33

ಬ್ರಹ್ಮಾವರ(reporterkarnataka news):

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ದಿವಂಗತರಾದ ಕ್ಲಬ್ಬಿನ ಉಪಾಧ್ಯಕ್ಷ ಸಾಲ್ವಡೊರ್ ನೊರೊನ್ಹಾ ಹಾಗೂ ಕ್ಲಬ್ಬಿನ ಸದಸ್ಯರಾಗಿದ್ದ ಜಯರಾಜ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತು.

ಕ್ಲಬ್ಬಿನ ಒಳಾಂಗಣದಲ್ಲಿ ಆಯೋಜಿಸಿದ ಈ ಸಂತಾಪ ಸಭೆಯಲ್ಲಿ ಪ್ರೊಫೆಸರ್ ಕೆ ನಾರಾಯಣನ್, ಜಿ ಬಾಲಕೃಷ್ಣ ಶೆಟ್ಟಿ , ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿಯವರು  ಅಗಲಿದ ಮಹನೀಯರನ್ನು ಹಾಗೂ ಅವರ ಸೇವೆಯನ್ನು ನೆನಪಿಸಿಕೊಂಡು ಅವರಿಗೆ ಶ್ರದ್ಧಾಂಜಲಿ ಕೋರಿದರು.

ಇದೆ ಸಂಧರ್ಭದಲ್ಲಿ ಮಾತನಾಡಿದ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಎಂ ಚಂದ್ರಶೇಖರ್ ಹೆಗ್ಡೆಯವರು, ಅವರ ಹಾಗೂ ನೊರೊನ್ಹಾರವರ 50 ವರುಷಗಳ ಸ್ನೇಹವನ್ನು ನೆನಪಿಸಿಕೊಂಡು ಅವರ ಅನುಭವಗಳನ್ನು ಹಂಚಿಕೊಂಡರು.  ಉಪಾಧ್ಯಕ್ಷರಾಗಿದ್ದ ನೊರೊನ್ಹಾರವರ ಸರಳ, ಸಜ್ಜನ ಹಾಗೂ ಪರೋಪಕಾರಿ ವ್ಯಕ್ತಿತ್ವವದ ಹಲವು ಉಧಾರಣೆಗಳನ್ನು ನೆನಪಿಸಿ ಈ ಅಜಾತಶತ್ರುವಿಗೆ ಶ್ರಧಾಂಜಲಿ ಕೋರಿದರು.

ಸಾಲ್ವಡೊರ್ ನೊರೊನ್ಹಾರವರು, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೆ ನೀಡಿದ ಸೇವೆಯನ್ನು ಗುರಿತಿಸಿ , ಕೆಲವೇ ದಿನಗಳಲ್ಲಿ ಕ್ಲಬ್ಬಿನ ಆವರಣದಲ್ಲಿ ಉದ್ಘಾಟನೆ ಹೊಂದಲಿರುವ ಹೊಸ ಈಜು ಕೊಳಕ್ಕೆ ‘ಸಾಲ್ವಡೊರ್ ನೊರೊನ್ಹಾ’ರವರ ಸ್ಮಾರಕವಾಗಿ ನಾಮಕರಿಸುವ ಪ್ರಸ್ತಾಪ ಮಂಡಿಸಲಾಯಿತು. ನೆರೆದಿರುವ ಸರ್ವ ಸದಸ್ಯರು ಈ ಸಲಹೆಯನ್ನು ಸ್ವಾಗತಿಸಿ , ಸರ್ವಾನುಮತಿಯಿಂದ ಒಪ್ಪಿಗೆ ನೀಡಿದರು.

1976 ರಿಂದ 2014 ವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಎಸ ಎಂ ಎಸ ಕಾಲೇಜಿನಲ್ಲಿ ಸೇವೆ ನೀಡಿದ ನೊರೊನ್ಹಾರವರು  ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಕಳೆದ ಮೇ 19ರಂದು ಕೊರೊನ ರೋಗದಿಂದ ಉಂಟಾಗಿರುವ  ಅರೋಗ್ಯ ಸಮಸ್ಯೆಗಳಿಂದ ಅವರು  ನಿಧನ ಹೊಂದಿದರು. 

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾಗಿದ್ದ ಗ್ರೆಗೊರಿ ಡಿಸಿಲ್ವರವರು ಮಾತನಾಡಿ ಅಗಲಿದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿದರು ಹಾಗೂ ಹಾಜರಿದ್ದ ಎಲ್ಲರಿಗೆ ಧನ್ಯವಾದ ಅರ್ಪಣೆ ಮಾಡಿದರು. ಎರಡು ನಿಮಿಷಗಳ ಮೌನ ಪ್ರಾರ್ಥನೆ ಆಚರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು