ಇತ್ತೀಚಿನ ಸುದ್ದಿ
ಬಸ್ ನಲ್ಲಿ ದೊರಕಿದ್ದ ದುಬಾರಿ ಮೊಬೈಲ್: ಮಾಲೀಕರಿಗೆ ತಲುಪಿಸಿದ ಸಂಡೂರು ಮೂಲದ ದಂಪತಿ
01/01/2023, 11:44

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ ಸಾರಿಗೆ ಬಸ್ ನಲ್ಲಿ ಮರೆತು ಬಿಟ್ಟು ಹೋದ ದುಬಾರಿ ಬೆಲೆಯ ಮೊಬೈಲ್ ನ್ನು. ಸಾರಿಗೆ ಸಿಬ್ಬಂದಿ ಮೊಬೈಲ್ ಮಾಲೀಕರಿಗೆ ಸುರಕ್ಷಿತವಾಗಿ ತಲುಪಿಸುವ ಮೂಲಕ, ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದ ಪ್ರಸಂಗ ಜರುಗಿದೆ.
ಕಲ್ಯಾಣ ಕರ್ನಾಟಕ ಸಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೂಡ್ಲಿಗಿ ಪಟ್ಟಣದ ಎಸ್ಡಿ ಎಮ್ಸಿ ತಾಲೂಕು ಘಟಕ ಅಧ್ಯಕ್ಷೆ ಹಾಗೂ ಪತ್ರಕರ್ತೆ ಡಿ.ಭಾಗ್ಯಮ್ಮ ಸೋಮುರವರು ಘಟನೆಗೆ ಸಾಕ್ಷಿಯಾಗಿದ್ದಾರೆ. ಅವರು ಕಳೆದೆರೆಡು ದಿನಗಳ ಹಿಂದೆಯಷ್ಟೇ ದಾವಣಗೆರೆಗೆ ತೆರಳಿ, ಮರುದಿನ ದಾವಣಗೆರೆ ಯಿಂದ ಕೂಡ್ಲಿಗಿ ಗೆ ಸಾರಿಗೆ ಬಸ್ ನಲ್ಲಿ ಹಿಂದಿರುಗಿ ಬಂದಿದ್ದಾರೆ.
ಕೂಡ್ಲಿಗಿ ಪಟ್ಟಣದಲ್ಲಿ ಬಸ್ ನಿಂದ ಕೆಳಗಿಳಿಯುವಾಗ ತಮ್ಮ ಮೊಬೈಲ್ ನ್ನು, ಅವರು ತಾವು ಕುಳಿತ ಬಸ್ ನ ಸೀಟ್ ನಲ್ಲಿಯೇ ಮರೆತು ಇಳಿದೋಗಿದ್ದಾರೆ. ನಂತರ ತಡವಾಗಿಯೇ ಮೊಬೈಲ್ ನ್ನು ಗಮನಿಸಿದ ಹತ್ತಿರದ ಸೀಟ್ ನಲ್ಲಿದ್ದ, ಸಹ ಪ್ರಯಾಣಿಕರಾದ ಸಂಡೂರು ಮೂಲದ ಅಪರಿಚಿತ ದಂಪತಿ ಭಾಗ್ಯಮ್ಮರವರ ಮೊಬೈಲ್ ನ್ನು ಬಸ್ ನಿರ್ವಾಹಕ ಹಾಗೂ ಚಾಲಕರಿಗೆ ತಲುಪಿಸಿದ್ದಾರೆ, ಕೂಡ್ಲಿಗಿ ಘಟಕದ ಸಿಬ್ಬಂದಿ ಮಾಲೀಕರಾದ ತಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ಘಟಕ ದ ಕಚೇರಿಗೆ ತಮ್ಮ ಕರೆಸಿಕೊಂಡು ಮೊಬೈಲ್‌ನ್ನು ತಮಗೆ ತಲುಪಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಯಾಣಿಕರಾದ ಸಂಡೂರು ಮೂಲದ ಅಪರಿಚಿತ ದಂಪತಿ ಹಾಗೂ ಸಾರಿಗೆ ಘಟಕ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.