ಇತ್ತೀಚಿನ ಸುದ್ದಿ
ಅನಾಥ ಅಂಧ ಅಜ್ಜಿಗೆ ಆಶ್ರಯ: ಅನಾಥಾಶ್ರಮ ಸೇರಿಸಿದ ಕರವೇ ಫ್ರಾನ್ಸಿಸ್ ಡಿಸೋಜ
22/12/2022, 21:33
ಮಡಿಕೇರಿ(reporterkarnataka.com): ಕರ್ನಾಟಕ ರಕ್ಷಣಾ ವೇದಿಕೆಯ ಫ್ರಾನ್ಸಿಸ್ ಡಿಸೋಜ ಅವರು ಸೋಮವಾರಪೇಟೆಯ ಹಾನಗಲ್ ಗ್ರಾಮದಲ್ಲಿ ಇದ್ದ ಅಂಧ ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಫ್ರಾನ್ಸಿಸ್ ಡಿಸೋಜ ಅವರು ಮರ್ವಿನ್ ಡಿಸೋಜ ಹಾಗೂ ಮನೋಜ್ ಭಟ್ ಅವರಿಗೆ ನೆರವಿನಿಂದ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಆಟೋ ರಾಜ ಸಂಸ್ಥೆಗೆ ಕರವೇ ಕಾರ್ಯಕರ್ತರು ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದ್ದಾರೆ.
ಕರವೇ ಫ್ರಾನ್ಸಿಸ್ ಡಿಸೋಜ ರವರ ಮಾತು ನಾವು ದೇವರನ್ನು ಕಂಡಿಲ್ಲ. ಇಂಥ ಅನಾಥರ ಕೆಲಸ ಮಾಡಿ ನಾವು ದೇವರನ್ನು ಕಾಣುತ್ತಿದ್ದೇವೆ. ಹಾಗಾಗಿ ಇಂಥ ಕೆಲಸಗಳನ್ನು ನಾನು ಮುಂದೆಯೂ ಸಹ ಮಾಡುತ್ತಲೇ ಇರುತ್ತೇನೆ ಎಂದು ಫ್ರಾನ್ಸಿಸ್ ನುಡಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿದ ಹಾನಗಲ್ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಕಣ್ಣು ಕಾಣದ 75 ವರ್ಷದ ಕಣ್ಣು ಕಾಣದ ಅಜ್ಜಿ ತಿರುಗಾಡುತ್ತಿದ್ದರು. ಅವರು ಜನರು ಕೊಡುವ ಆಹಾರವನ್ನು ಊಟ ಮಾಡುತ್ತಾ ಚಳಿ ಗಾಳಿ ಮಳೆಯಲ್ಲಿ ಸುತ್ತಾಡಿಕೊಂಡು ಒಂದು ಹಾಳು ಬಿದ್ದಿರುವ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಇದನ್ನೆಲ್ಲ ಗಮನಿಸಿದ ಹಾನಗಲ್ ಗ್ರಾಮಸ್ಥರು ಮಾರ್ವಿನ್ ಡಿಸೋಜ ಅವರಿಗೆ ತಿಳಿಸಿದ್ದರು.
ಹಾಗಾಗಿ ಮಾರ್ವಿನ್ ಡಿಸೋಜರವರು ಕರವೇ ಕಾರ್ಯಕರ್ತರಿಗೆ ತಿಳಿಸಿದ ಮೇರೆಗೆ ಅಜ್ಜಿಯನ್ನು ಕರೆದುಕೊಂಡು ಬಂದು ಮಾರ್ವೀನ್ ಡಿಸೋಜರವರ ಮನೆಯಲ್ಲಿ ಸಂಪೂರ್ಣವಾಗಿ ಸ್ನಾನ ಮಾಡಿಸಿ ಸಂಪೂರ್ಣವಾಗಿ ಸ್ವಚ್ಛಪಡಿಸಿ ಕೈಯಲ್ಲಿದ್ದ ಉಗುರುಗಳನ್ನು ಮತ್ತು ಕಾಲಲ್ಲಿದ್ದ ಉಗುರುಗಳನ್ನು ತೆಗೆದು ಹಾಗೂ ಕೂದಲನ್ನು ಕಟ್ ಮಾಡಿ ಹೊಸ ಬಟ್ಟೆಗಳನ್ನು ತೊಡಸಿ ಈ ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಲು ಖುದ್ದಾಗಿ ಕಾರಿನಲ್ಲಿ ಹೋಗಿ ಸೇರಿಸಿ ಮಾನವೀಯತೆ ಮೆರೆದಿದ್ದೇವೆ. ಅಜ್ಜಿಯನ್ನು ಸಾಗಿಸಲು ಮರ್ವಿನ್ ಕಾರಿನ ವ್ಯವಸ್ಥೆ ಮಾಡಿದ್ದರು.