5:05 PM Saturday11 - April 2026
ಬ್ರೇಕಿಂಗ್ ನ್ಯೂಸ್
3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ: ಚಂದ್ರದ್ರೋಣ ಪರ್ವತದ 2 ಸಾವಿರ… ಪ್ರಧಾನಿ‌ ಮೋದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ರವಾನೆ: ವಿದೇಶಿ ಏಜೆನ್ಸಿಗಳ ಜತೆ ಸಂಪರ್ಕ;… ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ… ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ

ಇತ್ತೀಚಿನ ಸುದ್ದಿ

ಉಡುಪಿ: ಮನೆಯ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

14/12/2022, 22:16

ಉಡುಪಿ(reporterkarnataka.com): ಮನೆಯ ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು‌ ಗೋದ್ರೇಜ್‌ ಲಾಕರ್‌ ನಲ್ಲಿಟ್ಟಿದ್ದ 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು‌ ಹೋಗಿರುವ ಘಟನೆ ಉಡುಪಿ ಕುಂಜಿಬೆಟ್ಟು ಎಂಬಲ್ಲಿ ನಡೆದಿದೆ.

ಕುಂಜಿಬೆಟ್ಟು‌ ನಿವಾಸಿ ವೈಷ್ಣವಿ ಆಚಾರ್ಯ(50) ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರ‌ ಮನೆಗೆ ಡಿ.11ರ ರಾತ್ರಿಯಿಂದ ಡಿ.12ರ ಬೆಳಿಗ್ಗಿನ‌ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ನುಗ್ಗಿ, ಗೋದ್ರೇಜ್‌ ಲಾಕರ್‌ ನಲ್ಲಿಟ್ಡಿದ್ದ ಡೈಮಂಡ್‌ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್‌-1, ಬೆಳ್ಳಿಯ ತಟ್ಟೆಗಳು-2 ಹಾಗೂ ಚಿನ್ನದ ಲೇಪನ ಇರುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,48 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ‌ ತಿಳಿಸಲಾಗಿದೆ .

ಈ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು