8:56 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಕೊನೆಗೂ ಬಂದ್ರು ಡಿಸಿಎಂ ಸಾಹೇಬ್ರು: ನದಿಯಲ್ಲಿ ಮುಳುಗಿ ಸಾವನ್ನಪ್ಪಿದ 4 ಮಂದಿ ಸಹೋದರರ ಮನೆಗೆ ಸವದಿ ಭೇಟಿ: 2 ಲಕ್ಷ ಪರಿಹಾರ

03/07/2021, 14:28

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಕೃಷ್ಣ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಕುಟುಂಬಕ್ಕೆ ಸುಮಾರು 6 ದಿನಗಳ ಬಳಿಕ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಶ್ಮಣ ಸವದಿ ಅವರು ಶಾಸಕ ಮಹೇಶ್ ಕುಮಟಳ್ಳಿ ಜತೆ ಭೇಟಿ ನೀಡಿ ಸಾಂತ್ವನ ಹೇಳಿದರು.

ದುಃಖತೃಪ್ತ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಾಂತ್ವನ ಹೇಳುವುದರ ಜೊತೆಗೆ ಮೃತರ ಮಕ್ಕಳ ಹಾಗೂ ತಂದೆ ತಾಯಿಯ ಉಪ ಜೀವನಕ್ಕೆ  ಸಹಾಯವಾಗಲೆಂದು ವೈಯಕ್ತಿಕ ನೆಲೆಯಲ್ಲಿ 2 ಲಕ್ಷ ರೂ. ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಆದಷ್ಟು ಬೇಗ ಸರ್ಕಾರದಿಂದ ಪರಿಹಾರವನ್ನು ಮುಂಜೂರು ಮಾಡಿಸಿ ಬಡ ಕುಟುಂಬಕ್ಕೆ ನೆರವು ಒದಗಿಸುವುದಾಗಿ ಭರವಸೆ ನೀಡಿದರು.

ದುರ್ಘಟನೆ ನಡೆದು 4 ದಿನಗಳ ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಅವರು ಎರಡನೇ ಬಾರಿ  ಡಿಸಿಎಂ ಜತೆಗೆ ಭೇಟಿ ನೀಡಿ ಕ್ಷೇತ್ರದ ಜನತೆಯ ಮನ ಗೆಲ್ಲಲ್ಲು ಪ್ರಯತ್ನಿಸಿದ್ದಾರೆ. ಶಾಸಕರು ತಡವಾಗಿ ಆಗಮಿಸಿದ ಬಗ್ಗೆ ಈ ಹಿಂದೆ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ದುಂಡಪ್ಪ ಕೋಮ್ಮರ್, ಆರ್. ಬಂಗಾರೆಪ್ಪ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ್ ಪಾಟೀಲ, ಹಲ್ಯಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ವೆಂಕಟೇಶ್ ಸಂದ್ರಿಮಣಿ, ಗ್ರಾಮದ ಹಿರಿಯರಾದ ಸುರೇಶ ವಾಡೆದ, ಸಂಗಮೇಶ್ ಇಂಗಳಿ, ರಾವಸಾಬ ಪಾಟೀಲ್, ಗೋಪಾಲ ಮಂಗಸೂಳಿ,ಕುಮಾರ್ ಪಾಟೀಲ್, ಸಿದ್ದಪ್ಪ ಲೋಕುರ್, ಚಂದ್ರಕಾಂತ್ ಕಾಗವಾಡ, ಮಹಾಂತೇಶ್ ಶಿಂಗಿ, ಶಿವಾನಂದ್ ಇಂಗಳಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉಪಸ್ಥಿತರಿದ್ದರು..

ಇತ್ತೀಚಿನ ಸುದ್ದಿ

ಜಾಹೀರಾತು