ಇತ್ತೀಚಿನ ಸುದ್ದಿ
ತಲ್ವಾರ್ ದಾಳಿ ಯತ್ನ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೊದಲ ಪ್ರತಿಕ್ರಿಯೆ ಏನು?
14/10/2022, 18:24
ಮಂಗಳೂರು(reporterkarnataka.com): ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತಲ್ವಾರ್ ದಾಳಿ ಯತ್ನದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಕೇಳೋಣ ಬನ್ನಿ…
ಬೆಂಗಳೂರಿನಿಂದ ಗುರುವಾರ ರಾತ್ರಿ ನಾನು ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ತೆರಳುತ್ತಿದ್ದ ವೇಳೆ ಫರಂಗಿಪೇಟೆ ಸಮೀಪ ಸ್ಕಾರ್ಪಿಯೊ ವಾಹನ ಓವರ್ ಟೇಕ್ ಮಾಡಿ ನನ್ನ ಸರಕಾರಿ ಕಾರಿಗೆ ಎರಡು ಬಾರಿ ತಲ್ವಾರ್ ದಾಳಿ ಮಾಡಲಾಯಿತು.
ನಾನು ಸ್ನೇಹಿತನ ಐ20 ಕಾರಿನಲ್ಲಿದ್ದೆ, ನಾನು ಸರಕಾರಿ ಕಾರಿನಲ್ಲಿ ಇಲ್ಲ ಎಂದು ಗೊತ್ತಾದ ಮೇಲೆ ಐ20 ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಕಾರಿನಲ್ಲಿ ಒಬ್ಬನೇ ಇದ್ದು, ಡ್ರೈವ್ ಮಾಡಿಕೊಂಡು ಎರಡು ಬಾರಿ ತಲವಾರು ದಾಳಿಗೆ ಯತ್ನಿಸಿದ್ದ, ಹಾಗೆ ಕಾರಿನಿಂದ ಇಳಿಯಲು ಯತ್ನಿಸಿದ್ದ ಎಂದು ಶಾಸಕರು ಹೇಳಿದ್ದಾರೆ.
ದಾಳಿಗೆ ಬಳಸಿದ ಕಾರು ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು. ಯಶಸ್ವಿ ಹಾಲ್ ಬಳಿಕ ನಾನು ಡಿವೈಎಸ್ಪಿಗೆ ಮಾಹಿತಿ ನೀಡಿದ್ದೆ.ಬಳಿಕ ಎರಡು ಪ್ಯಾಸೆಂಜರ್ ಕಾರಿನ ಜೊತೆ ತಲವಾರು ದಾಳಿಗೆ ಉತ್ನಿಸಿದವನ ಕಾರು ತೆರಳಿದೆ ಎಂದು ಹೇಳಿದ್ದಾರೆ.
ದಾಳಿ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಎರಡೆರಡು ಬಾರಿ ಅವರು ಕರೆ ಮಾಡಿದ್ದಾರೆ. ಗನ್ ಮ್ಯಾನ್ ನೀಡುವುದಾಗಿ ಹೇಳಿದ್ದಾರೆ. ಈ ಕುರಿತು ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂಜಾನೆ 2 ಗಂಟೆಗೆ ಕೇಸ್ ದಾಖಲು ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ಗೃಹ ಸಚಿವರು ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ, ನನಗೆ ಅಂಗರಕ್ಷಕರನ್ನು ನೀಡಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.