2:21 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮೈಸೂರು ದಸರಾ ಪ್ರಧಾನ ಕವಿಗೋಷ್ಠಿ: ಮಂಗಳೂರಿನ ಮಹೇಶ್ ಆರ್. ನಾಯಕ್ ಆಯ್ಕೆ

02/10/2022, 13:07

ಮೈಸೂರು(reporterkarnataka.com): ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಧಾನ ಕವಿಗೋಷ್ಠಿಗೆ ಮಂಗಳೂರಿನ ಕವಿ, ಸಾಹಿತಿ ಮಹೇಶ ಆರ್. ನಾಯಕ್ ಆಯ್ಕೆಯಾಗಿದ್ದಾರೆ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಉದ್ಘಾಟಿಸಲಿರುವ ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸುಪ್ರಸಿದ್ಧ ಹಿರಿಯ ಕವಿ ಡಾ. ಎಚ್. ಎಸ್. ಶಿವಪ್ರಕಾಶರವರು ವಹಿಸಲಿದ್ದಾರೆ. ಕಳೆದ ಮೂರು ದಶಕಗಳಿಂದ ಕನ್ನಡ ಮತ್ತು ಕೊಂಕಣಿ ಭಾಷೆಯ ಸಾಹಿತ್ಯ ರಚನೆಯಲ್ಲಿ ಸಕ್ರಿಯವಾಗಿರುವ ಮಹೇಶ ಆರ್. ನಾಯಕ್ ಅವರು ‘ಕಲ್ಲಚ್ಚು ಪ್ರಕಾಶನದ’ ಮುಖ್ಯಸ್ಥರಾಗಿದ್ದು, ಈವರೆಗೆ 80ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ ಮತ್ತು ಅಮೆರಿಕದ ‘ಅಕ್ಕ’  ವಿಶ್ವ ಕನ್ನಡ ಸಮ್ಮೇಳನ, ಸಿಂಗಾಪುರ ಬರಹಗಾರರ ಹಬ್ಬ, ಕೆನಡಾದ ಟೊರೆಂಟೂ ಅಂತರರಾಷ್ಟ್ರೀಯ ಸಿನಿಮಾ ಹಬ್ಬ, ಹಾಂಕ್ ಕಾಂಗ್ ಸಾಹಿತ್ಯ ಹಬ್ಬ, ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್ ನಲ್ಲಿ ಜರುಗಿದ ವಿಶ್ವ ಹಿಂದಿ ಸಮ್ಮೇಳನ, ಜರ್ಮನಿಯ ಫ್ರಾಂಕ್ ಫಾರ್ಟ್ ಪುಸ್ತಕ ಹಬ್ಬ, ಭೂತಾನ್ ಲಿಟರೇಚರ್ ಫೆಸ್ಟಿವಲ್,  ದುಬೈ ಲಿಟ್ ಫೆಸ್ಟ್, ಶ್ರೀಲಂಕಾ ಲಿಟ್ ಫೆಸ್ಟ್, ಜೈಪುರ ಲಿಟ್ ಫೆಸ್ಟ್, ವಿಶ್ವ ಕೊಂಕಣಿ ಅಧಿವೇಶನ ಸೇರಿದಂತೆ ರಾಷ್ಟ್ರೀಯ ಅಂತರರಾಷ್ಟ್ರೀಯವಾಗಿ ನೂರಾರು ಸಾಹಿತ್ಯಪರ ಕಾರ್ಯಕ್ರಮಗಳಲ್ಲಿ ವಿವಿಧ ನೆಲೆಗಳಲ್ಲಿ ಭಾಗಿಯಾಗಿದ್ದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾಗಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು