9:18 PM Saturday23 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಆಧುನಿಕ ಶಿಕ್ಷಣ ಕಲಿಸದ ಪಾಠವನ್ನು ಮಹಾಮಾರಿ ಕೋವಿಡ್-19 ಕಲಿಸಿತು: ನಮ್ಮ ಒಳ ಮನಸ್ಸು ತೆರೆಯೋಣ

27/06/2021, 18:15

“ಸುಂದರವಾಗಿರುವ ಕೆಲಸದ ಹಿಂದೆ ಹೋಗುವುದಕ್ಕಿಂತ ಸುಂದರವಾಗಿಸುವ ಕೆಲಸದತ್ತ ಹೋಗುವುದು ಉತ್ತಮ”. ಈ ಮಾತು ನೆನಪಾಗಲು ಈ ಕೋವಿಡ್ -19 ಕಾರಣ. ಏಕೆಂದರೆ, ಅದೆಷ್ಟೋ ಯುವ ಜನರು ತಮ್ಮ ಜೀವನದ ಪಯಣದಲ್ಲಿ ಬೇರೆಯವರ ಸಲಹೆ ಸೂಚನೆಗಳ ನೆರಳಿನಲ್ಲಿ ತಮ್ಮ ಜೀವನವನ್ನು ಹುಡುಕುತ್ತಾ ದಣಿದು ಕೊನೆಗೆ ಸಿಕ್ಕ ಕೆಲಸದಲ್ಲಿಯೇ ತೃಪ್ತಿಯನ್ನು ಹುಡುಕುತ್ತಾ, ಜೀವನವನ್ನು ನಡೆಸುತ್ತಾರೆ. ಈ ಪ್ರವೃತ್ತಿ ಸಂತಸದಾಯಕವಲ್ಲ. ಇದಕ್ಕೆ ಸಣ್ಣ ಉದಾಹರಣೆ ಕೋಡ್ -19 ನಂತಹ ಮಹಾಮಾರಿಯಿಂದ ಈ ನಮ್ಮ ಶಿಕ್ಷಣ ರಂಗ ತತ್ತರಿಸಿ ಹೋಗುತ್ತಿದೆ. ಅನುದಾನರಹಿತ ಶಾಲಾ/ಕಾಲೇಜುಗಳಲ್ಲಿ ಶಿಕ್ಷಕರಿಗೆ ಸಿಗುವ ಸಂಬಳವೇ 15 ಸಾವಿರದಿಂದ 20 ಸಾವಿರ. ಅದರಲ್ಲೂ ಇಂದಿನ ಸ್ಥಿತಿಯಲ್ಲಿ 50 % ಸಂಬಳ, ಅದೆಷ್ಟೋ ಶಿಕ್ಷಣ ಸಂಸ್ಥೆಯಲ್ಲಿ ಸಂಬಳವೇ ಇಲ್ಲ. ನಗರ ಪ್ರದೇಶದಲ್ಲಿ ಕೆಲಸವನ್ನು ಅರಸಿ ಬಂದರವರ ಗತಿ ಅಧೋಗತಿಯಾಗಿದೆ.

ಇಂತಹ ವಿಷಯಗಳ ಬಗ್ಗೆ ಚರ್ಚೆಗಳು ನಡೆದಾಗ, ಅನೇಕ ವಾದ ವಿವಾದಗಳು ನಡೆದು ಕೊನೆಗೆ ರಾಜಕೀಯದಲ್ಲಿ ಅಂತ್ಯವಾಗುತ್ತದೆ. `ಕೋಡ್ -19′ ಪ್ರಾಕೃತಿಕ ವಿಕೋಪ, ಇದರಲ್ಲಿ ಯಾರ ದೋಷವೂ ಇಲ್ಲ. ಇದಕ್ಕೆ ಕಾರಣ ಕೇವಲ ಈ ಮಾಹಾಮಾರಿ, ಈ ಪರಿಸ್ಥಿತಿಯನ್ನು ಸಹಿಸಲಾರದ ಅದೆಷ್ಟೋ ಶಿಕ್ಷಕರು ಬೀದಿಗಿಳಿದು ಇತರ ಉದ್ಯೋಗವನ್ನು ಪ್ರಾರಂಭಿಸಿದರು. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಇದರಿಂದ ಶಿಕ್ಷಣದ ಮಟ್ಟ ಕುಸಿಯುತ್ತದೆ. ಏಕೆಂದರೆ, ನಮ್ಮನ್ನು ಅನುಸರಿಸುವ ವಿದ್ಯಾರ್ಥಿಗಳ ಮೇಲೆ ಮೌಲ್ಯಯುತ ಪರಿಣಾಮ ಬೀರುವುದಿಲ್ಲ. ಶಿಕ್ಷಕ ವೃತ್ತಿಯನ್ನು ಇತರ ಯಾವುದೇ ವೃತ್ತಿಗೆ ಸರಿಸಮಾನವಲ್ಲ, ದೇವರು ಮೊದಲು ಸ್ಥಾನದಲ್ಲಿದ್ದರೆ, ಶಿಕ್ಷಕ ಎರಡನೇ ಸ್ಥಾನದಲ್ಲಿ, ಮೂರನೇ ಸ್ಥಾನದಲ್ಲಿ ಪೋಷಕರು. ತರಗತಿಯಲ್ಲಿ ನಮ್ಮ ಬೋಧನೆಗಿಂತಲೂ ನಮ್ಮ ವರ್ತನೆ ಮುಖ್ಯವಾದುದ್ದು, ವಿದ್ಯಾರ್ಥಿಗಳು ನಮ್ಮನ್ನು ಅನುಸರಿಸುವುದು ನಮ್ಮ ವರ್ತನೆಗೆ ಏನಃ ಬೋಧನೆಗಲ್ಲ,

ಇಂತಹ ಸ್ಥಿತಿಗೆ ಪರಿಹಾರವನ್ನು ಇತರರಿಂದ ಯಾಚಿಸುವುದರ ಬದಲಿಗೆ,ಸರಕಾರದ ಧನ ಸಹಾಯ, ಹೀಗೆ ಸರಕಾರದಿಂದ ಸಹಾಯ ಹಸ್ತವನ್ನು ನೀರೀಕ್ಷಿಸುವ ಬದಲು ನಿಮ್ಮ ಒಳ ಮನಸ್ಸನ್ನು ಒಮ್ಮೆ ತೆರೆದು ನೋಡಿದರೆ ಕುಬೇರನ ಖಜನೆಯೇ ಸಿಗುತ್ತದೆ. ಒಮ್ಮೆ ನಿಮ್ಮ ಮನಸ್ಸನ್ನು ತೆರೆದು ನೋಡಿದರೆ, ಅನೇಕ ದಾರಿಗಳು ಸಿಗುತ್ತವೆ. ಆದರೆ ಹುಡುಕುವ ಮನಸ್ಸು ನಮ್ಮದಾಗಿರಬೇಕು. ಇದಕ್ಕೆ ಸಾಕ್ಷಿ ಗಾಂಧೀಜಿಯವರ “ನಯಿತಾಲೀಮ್’ ಎಂಬ ಶಿಕ್ಷಣ, ಅಂದೇ ಅವರು ಈ *ನಮಿತಾಲೀಮ್’ ಬಗ್ಗೆ ತಿಳಿಸಿದ್ದರು. ಅಲ್ಲದೇ, ಅವರು ತಮ್ಮ ಕೊನೆಯಲ್ಲಿಯೂ ಚರಕದಿಂದ ನೂಲನ್ನು ತರಿಸುತ್ತಿದ್ದರು. ಇಂತಹ ಹವ್ಯಾಸಗಳು ನಮ್ಮಂತಹ ಜನಸಾಮಾನ್ಯರಿಗೇಕ್ಕಿಲ್ಲ ? ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿದಾಗ “ಸುಂದರವಾಗಿರುವ ಕೆಲಸದ ಹಿಂದೆ ಹೋಗುವುದಕ್ಕಿಂತ ಸುಂದರವಾಗಿಸುವ ಕೆಲಸದತ್ತ ಹೊಗುವುದು ಉತ್ತಮ” ಎನ್ನುವ ನುಡಿಮುತ್ತು ಪರಿಹಾರವಾಯಿತು. ಏನೆಂದರೆ, ಈ ಕೋವಿಡ್ ಕೆಲವರಿಗೆ ಮಾಹಾಮಾರಿಯಾದರೆ, ಮತ್ತೆ ಕೆಲವರಿಗೆ ವರದಾನ, ಅದೇಷ್ಟೋ ಶಿಕ್ಷಕರು ಉದ್ಯೋಗದ ಜೊತೆಗೆ ಕೃಷಿಯಲ್ಲಿ ಹೊಸ ಸಾಧನೆಯನ್ನು ಮಾಡುತ್ತಿದ್ದಾರೆ. ತಮ್ಮ ಆಸಕ್ತಿಯನ್ನು ಕೃಷಿ ರಂಗದಲ್ಲಿ ತೊಡಗಿಸುತ್ತಿದ್ದಾರೆ. ಸಮಯದ ಸದುಪಯೋಗವನ್ನು ಮಾಡುತ್ತಿದ್ದಾರೆ. ಅದೆಷ್ಟೋ ಚಿತ್ರರಂಗ ನಟರೂ ಸಹ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹವರಿಂದ ನಾನು ಸಹ ಕೃಷಿಯತ್ತ ಆಕರ್ಷಿತಳಾದೆ.

ಈ ಲಾಕ್ ಡೌನ್  ಸಮಯದಲ್ಲಿ ಅನೇಕ ಜನರನ್ನು ಸಂಪರ್ಕಿಸಿದೆ. ಗೃಹ ಉದ್ಯೋಗದಿಂದ ಹಿಡಿದು ಸಣ್ಣ ಉದ್ಯೋಗದ ವರೆಗೂ ವಿಷಯವನ್ನು ಕಲೆ ಹಾಕಿದೆ, ಅನೇಕ ರೈತರನ್ನು ಸಂಪರ್ಕಿಸಿದೆ. ಯೂ ಟ್ಯೂಬ್ ಸಹಾಯದಿಂದ ಅನೇಕ ಕೃಷಿ ಆಧಾರಿತ ಉದ್ಯೋಗವನ್ನು ವೀಕ್ಷಿಸಿದೆ. ಇದರಿಂದ ತಿಳಿದ ವಿಷಯವೇನೆಂದರೆ, ಸರಕಾರದಿಂದ ಕೃಷಿ ಆಧಾರಿತ ಉದ್ಯೋಗಕ್ಕೆ ಅತಿ ಹೆಚ್ಚಿನ ಬೆಂಬಲ, ಸಹಕಾರ, ನೆರವು, ಧನ ಸಹಾಯ ಹಾಗೇ ಅಗತ್ಯ ತರಬೇತಿಗಳು ಸಿಗುತ್ತಿವೆ. ಇದಾದ ಮೇಲೆ ಅರಣ್ಯ ಇಲಾಖೆಯವರನ್ನು, ತೋಟಗಾರಿಕಾ ಇಲಾಖೆ, ಜೇಣು ಸಾಕಾಣಿಕೆ,  ಹೀಗೆ ಕೃಷಿ ಸಂಬಂಧಿಸಿದ ಅನೇಕ ಇಲಾಖಾ ಮುಖ್ಯಸ್ಥರನ್ನೇ ಫೋನ್ ಮೂಲಕ ವಿಚಾರಿಸಿದೆ. ಉತ್ತಮ ಸಲಹೆಯೊಂದಿಗೆ, ಪ್ರೋತ್ಸಾಹವೂ ದೊರಕಿತು. ಈಗಾಗಲೇ ನನ್ನ ತೋಟದಲ್ಲಿ ಅಡಿಕೆ, ಕಾಳುಮೆಣಸು, ತೆಂಗು ಬರುತ್ತಿದೆ. ಇದರ ಅಭಿವೃದ್ಧಿಗಾಗಿ ಕೆಲವು ಯೋಜಗಳನ್ನು ಸಿದ್ಧಪಡಿಸಿದ್ದೇನೆ.

ಜೇನು ಸಾಕಾಣಿಕೆ, ದನ ಸಾಕಾಣಿಕೆ, ಆಡಿಕೆಯಿಂದ ಬರುವ ಎಲೆಗಳಿಂದ ತಟ್ಟೆಗಳನ್ನು ತಯಾರಿಸುವುದು, ತೆಂಗಿನ ಪ್ರತಿಯೊಂದು ವಸ್ತುವಿನಿಂದಲೂ ಅನೇಕ ಕಸಬುಗಳನ್ನು ಮಾಡಬಹುದು. ತೋಟದ ಗಡಿಯಲ್ಲಿ ಜಾಗವಿದ್ದರೆ, ಇತರ ಬೆಲೆ ಬಾಳುವ ಗಿಡಗಳನ್ನು ಬೆಳೆಸಬಹುದು, ಅಂದರೆ, ಬೀಟೆ, ಶ್ರೀಗಂಧ, ಇತರೆ. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಇದರೊಂದಿಗೆ ಎರೆಹುಳು ಗೊಬ್ಬರದ ತಯ್ಯಾರಿ ಇತ್ಯಾದಿ.

ಇಂದಿನ ದಿನಗಳಲ್ಲಿ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದರಿಂದ ಜೈವಿಕವಾಗಿ ಬೆಳೆದ ಕೃಷಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೃಷಿಯಲ್ಲಿ ಒಂದನ್ನೇ ಮಾಡದೇ ಅನೇಕ ಕೃಷಿ ಪದ್ಧತಿಯನ್ನು ಬಳಸುವುದರಿಂದ

ಹೆಚ್ಚಿನ ಲಾಭವಿದೆ. ನನ್ನ ಪೂರ್ವಜರು ಕೃಷಿಕರಾಗಿರುವುದರಿಂದ ನನ್ನ ಒಲವು ಕೃಷಿಯತ್ತ. ನಿಮ್ಮ ಪೂರ್ವಜರ ಉದ್ಯೋಗವನ್ನು ಹವ್ಯಾಸವನ್ನಾಗಿಸಿಕೊಳ್ಳಿ. ಏಕೆಂದರೆ, ನೀವು ಹುಟ್ಟುವಾಗಲೇ ಆ ಉದ್ಯೋಗದ ಕೌಶಲಗಳು ನಿಮ್ಮ ಜೀವಕೋಶಗಳಲ್ಲಿರುತ್ತವೆ. ನೆನಪಿರಲಿ, ಎಲ್ಲಾ ಮೂಲ ಕಸುಬುಗಳು ಈಗ ಇಂಜಿನಿಯರಿಂಗ್ ವಿಷಯಗಳಾಗಿವೆ. ಹಾಗಾಗಿ ಯಾವುದೇ ಕೆಲಸವೂ ಸಣ್ಣದಲ್ಲ, ಈಗಾಗಲೇ ನೀವು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹಾಗೆ ನಿಮ್ಮ ವಿದ್ಯಾರ್ಥಿಯರಿಗೆ ಹೊಸ ಜ್ಞಾನದ ಅನುಭವವನ್ನು ನೀಡಬಹುದು. ನಿಮ್ಮ ವಿದ್ಯಾರ್ಥಿಯರೊಂದಿಗೆ ಸೇರಿ ಕೃಷಿ ಚಟುವಟಿಕೆಯಲ್ಲಿ ತೊಡಗಬಹುದು. ನಿಮ್ಮಲ್ಲಿರುವ ಹವ್ಯಾಸವನ್ನು ಬೆಳೆಸಿ, ಕೊನೆಗೂ ದೇಶ ಅನ್ನದ ರುಣದ ಮೇಲೆಯೇ ಅವಲಂಬಿತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು