ಇತ್ತೀಚಿನ ಸುದ್ದಿ
ಬ್ರಿಟನ್ ರಾಣಿ ಎಲಿಜಬೆತ್ ಅಂತ್ಯಕ್ರಿಯೆ: ಭಾರತ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
14/09/2022, 20:41
ಹೊಸದಿಲ್ಲಿ(reporterkarnataka.com): ಸುದೀರ್ಘ ಅವಧಿಗೆ ಬ್ರಿಟನ್ ರಾಣಿಯಾಗಿದ್ದ ಎಲಿಜಬೆತ್ II ಅವರ ಅಂತ್ಯಕ್ರಿಯೆಗೆ ಸೆಪ್ಟೆಂಬರ್ 19ರಂದು ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿ ಜಗತ್ತಿನ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅದೇ ರೀತಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಕ್ವೀನ್ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತ ಸರ್ಕಾರದ ಪರವಾಗಿ ದ್ರೌಪದಿ ಮುರ್ಮು ಅವರು ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್ 18ರಿಂದ 19ರವರೆಗೆ ದ್ರೌಪದಿ ಮುರ್ಮು ಅವರು ಲಂಡನ್‌ನಲ್ಲಿ ನಡೆಯುವ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಸುಮಾರು 70 ವರ್ಷಗಳ ಕಾಲ ಬ್ರಿಟನ್ ರಾಣಿಯಾಗಿದ್ದ ಕ್ವೀನ್ ಎಲಿಜಬೆತ್ II ಅವರು ಸೆಪ್ಟೆಂಬರ್ 8ರಂದು ನಿಧನರಾಗಿದ್ದಾರೆ. ಈಗ ಅವರ ಉತ್ತರಾಧಿಕಾರಿಯನ್ನಾಗಿ ಚಾರ್ಲ್ಸ್ III ಅವರನ್ನು ನೇಮಿಸಲಾಗಿದೆ. ಬ್ರಿಟನ್ ರಾಣಿಯ ನಿಧನಕ್ಕೆ ಜಗತ್ತೇ ಕಂಬನಿ ಮಿಡಿದಿದೆ.