9:01 PM Monday14 - July 2025
ಬ್ರೇಕಿಂಗ್ ನ್ಯೂಸ್
ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು

ಇತ್ತೀಚಿನ ಸುದ್ದಿ

ಭಗವದ್ಗೀತೆ ರಾಷ್ಟ್ರೀಯ ಗ್ರಂಥವೆಂದು ಘೋಷಿಸಲು ಕೇಂದ್ರ ಸರಕಾರ ಚಿಂತನೆ: ಸಂಸದ ಗೋಪಾಲ್ ಶೆಟ್ಟಿ ಪ್ರಸ್ತಾವನೆ

09/09/2022, 20:03

ಹೊಸದಿಲ್ಲಿ(reporterkarnataka.com): ಕೇಂದ್ರ ಸರ್ಕಾರವು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸುವ ಚಿಂತನೆಯಲ್ಲಿದೆ. ಆ ಮೂಲಕ ರಾಷ್ಟ್ರಗೀತೆ, ರಾಷ್ಟ್ರಧ್ವಜದಂತೆ ದೇಶದಲ್ಲಿ ಶೀಘ್ರದಲ್ಲೇ ರಾಷ್ಟ್ರ ಪುಸ್ತಕ ಬರಲಿದೆ.

ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ವಿವಿಧ ಸಚಿವಾಲಯಗಳಿಂದ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದು, ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ಕಳುಹಿಸಿದ ಪತ್ರದ ಆಧಾರದ ಮೇಲೆ ಸರ್ಕಾರ ಈ ಕಾರ್ಯವನ್ನು ಅನುಷ್ಠಾನಗೊಳಿಸುವ ಯೋಚನೆಯಲ್ಲಿದೆ.

ಜುಲೈ 5 ರಂದು ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ , ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದಿದ್ದು, ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವಾಗಿ ಘೋಷಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದ್ದರು. ಗೃಹ ಸಚಿವ ಶಾ ಅವರು ಜುಲೈ 18 ರಂದು ಈ ಪತ್ರಕ್ಕೆ ಉತ್ತರ ಕಳುಹಿಸಿದ್ದು, ತಮ್ಮ ಪತ್ರವನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಸಚಿವಾಲಯಗಳಿಗೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗೃಹ ಸಚಿವಾಲಯವು ಈ ವಿಷಯದಲ್ಲಿ ಶಿಕ್ಷಣ ಸಚಿವಾಲಯದ ಅಭಿಪ್ರಾಯವನ್ನು ಕೇಳಿದೆ. ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವಾಗಿ ಘೋಷಿಸುವ ಬಗ್ಗೆ ಶಿಕ್ಷಣ ಸಚಿವಾಲಯವು ಆಗಸ್ಟ್ 10 ರಂದು ತನ್ನ ಹೇಳಿಕೆಗಳನ್ನು ಕಳುಹಿಸಿದೆ ಎನ್ನಲಾಗಿದೆ. ಇದರ ನಂತರ, ಗೃಹ ವ್ಯವಹಾರಗಳ ಸಚಿವಾಲಯವು ಈಗ ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವಾಗಿ ಘೋಷಿಸುವ ಬಗ್ಗೆ ಸಂಸ್ಕೃತಿ ಸಚಿವಾಲಯದ ಅಭಿಪ್ರಾಯವನ್ನು ಕೇಳಿದ್ದು,ಅಲ್ಲಿಂದಲೂ ಸಕರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂಬ ಮಾಹಿತಿ ದೊರಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು