ಇತ್ತೀಚಿನ ಸುದ್ದಿ
ತೃತೀಯ ಲಿಂಗಿ ವಿದ್ಯಾರ್ಥಿಗೆ ಅಗೌರವ: ಐರ್ಲೆಂಡ್‌ನ ನ್ಯಾಯಾಲಯದಿಂದ ಶಿಕ್ಷಕನಿಗೆ ಜೈಲುಶಿಕ್ಷೆ
08/09/2022, 18:48
ದುಬ್ಲಿನ್(reporterkarnataka.com): ತೃತೀಯ ಲಿಂಗಿ ವಿದ್ಯಾರ್ಥಿಯೊಬ್ಬರನ್ನು ಅವಮಾನಿಸಿದ ಆರೋಪದ ಮೇಲೆ ಯುರೋಪ್‌ನ ಐರ್ಲೆಂಡ್‌ನ ನ್ಯಾಯಾಲಯ ಶಿಕ್ಷಕರೊಬ್ಬರಿಗೆ ಜೈಲುಶಿಕ್ಷೆ ವಿಧಿಸಿದೆ.
.ಸ್ತ್ರೀ ಅಥವಾ ಪುಲ್ಲಿಂಗ ಸಂಬೋಧಕ ಬಳಸದೆ ಮಾತನಾಡಿಸಲು ಒಪ್ಪದ ಶಿಕ್ಷಕರೊಬ್ಬರಿಗೆ ನ್ಯಾಯಾಲ ಶಿಕ್ಷೆ ಪ್ರಕಟಿಸಿದೆ. ವಿಲ್ಸನ್ ಶಾಲೆಯ ಎನೋಚ್ ಬ್ರೂಕ್ ಶಿಕ್ಷೆಗೆ ಗುರಿಯಾದ ಶಿಕ್ಷಕ.
ಶಾಲೆಯಲ್ಲಿರುವ ತೃತೀಯ ಲಿಂಗಿ ವಿದ್ಯಾರ್ಥಿಗೆ ಅವರು ಅವನು/ಅವಳು ಎಂದೇ ಸಂಬೋಧಿಸುವುದಾಗಿ ಹೇಳಿದ್ದಾರೆ.
ವಿದ್ಯಾರ್ಥಿ, ಅವರ ಪೋಷಕರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಮನವಿ ಮಾಡಿದರೂ ಈ ವಿಚಾರದಲ್ಲಿ ಎನೋಚ್ ಒಪ್ಪಿಲ್ಲ. ಇದು ಕ್ರೈಸ್ತ ಧರ್ಮದ ವಿರುದ್ಧ ಎಂದು ಅವರು ವಾದಿಸಿದ್ದಾರೆ.
ಇದಾದ ಬೆನ್ನಲ್ಲೇ ಶಾಲೆಯು ಎನೋಚ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈ ವಿಚಾರವು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದು, ಶಿಕ್ಷಕನಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.