1:32 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹಣದುಬ್ಬರ: ಯುರೋಪ್ ನಲ್ಲಿ ವಿದ್ಯುತ್, ಗ್ಯಾಸ್ ಬೆಲೆ ಸಿಕ್ಕಾಪಟ್ಟೆ ಏರಿಕೆ; ಜನಜೀವನ ದುಸ್ತರ

06/09/2022, 20:14

ಲಂಡನ್(reporterkarnataka.com):
ಜರ್ಮನಿ, ಬ್ರಿಟನ್ ಸೇರಿದಂತೆ ಯೂರೋಪ್​ನ ಹಲವು ಶ್ರೀಮಂತ ದೇಶಗಳು ಹಣದುಬ್ಬರದಿಂದ  ತತ್ತರಿಸಿ ಹೋಗಿವೆ. ಜನ ಸಾಮಾನ್ಯ ಬದುಕಿನ ಮೇಲೆ ಇದು ಬಲವಾದ ಏಟು ನೀಡಿದೆ. ಜನರ ಬದುಕು ದುಸ್ತರವಾಗಿದೆ.

ಯೂರೋಪ್​ನಲ್ಲಿ ಈ ವರ್ಷ ದಾಖಲೆ ಮಟ್ಟದ ಉಷ್ಣಾಂಶ ಏರಿಕೆಯಾಗಿದೆ. ಆದರೆ ಹವಾನಿಯಂತ್ರಕಗಳು (ಎಸಿ) ಅಥವಾ ಫ್ಯಾನ್ ಬಳಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಬಟ್ಟೆಗಳಿಗೆ ಐರನ್ ಮಾಡಲು, ಧಾನ್ಯ-ತರಕಾರಿ ಬೇಯಿಸಿ ಅಡುಗೆ ಮಾಡಲೂ ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಮತ್ತು ಅಡುಗೆ ಅನಿಲದ ಬೆಲೆ ವಿಪರೀತ ಹೆಚ್ಚಾಗಿದ್ದು, ದುಡಿಮೆಯ ಬಹುಪಾಲು ಇವೆರೆಡಕ್ಕೆ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಅನಿವಾರ್ಯವಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ದೇಶಗಳಲ್ಲಿ ವಿದ್ಯುತ್ ಮತ್ತು ಅಡುಗೆ ಅನಿಲದ ಬಳಕೆ ಕಡಿಮೆಯಾಗಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಯೂರೋಪ್​ನಲ್ಲಿ ಚಳಿಗಾಲ ಆರಂಭವಾಗಲಿದ್ದು, ರಷ್ಯಾ-ಉಕ್ರೇನ್ ಗಲಭೆ ಒಂದು ಹಂತಕ್ಕೆ ಬಂದು ಅನಿಲ ಸರಬರಾಜು ಮೊದಲ ಸ್ಥಿತಿಗೆ ಮರಳದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಷಮಿಸಲಿದೆ. ಜರ್ಮನಿ ಮತ್ತು ನಾರ್ವೆ, ಬ್ರಿಟನ್​ ದೇಶಗಳಲ್ಲಿ ಸಾಮಾಜಿಕ ಅಸಂತುಷ್ಟಿ ಹೆಚ್ಚಾಗಿ ಜನರು ಬೀದಿಗಳಿದು ಪ್ರತಿಭಟಿಸುವ ಸಾಧ್ಯತೆಯಿದೆ. ಬ್ರಿಟನ್​ನ ರೈಲ್ವೆ ಇಲಾಖೆ, ಬಂದರು ನೌಕರರು ಹಾಗೂ ಜರ್ಮನಿಯ ಲುಫ್ತಾನ್ಸಾ ಏರ್​ಲೈನ್ಸ್​ ಸಿಬ್ಬಂದಿ ವೇತನ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಹಣದುಬ್ಬರ ಮತ್ತು ಬದಲಾದ ಜೀವನಶೈಲಿಯು ಜನರ ಆಕ್ರೋಶವಾಗಿ ಬದಲಾಗಿ, ಸಮಾಜದ ಹಲವು ವರ್ಗಗಳಲ್ಲಿ ಅಸಮಾಧಾನ ಹೆಚ್ಚಾಗಬಹುದು. ಡಿಸೆಂಬರ್ ಹೊತ್ತಿಗೆ ಪ್ರತಿಭಟನೆಗಳು ಈ ದೇಶಗಳಲ್ಲಿ ಸಾಮಾನ್ಯವಾಗಬಹುದು ಎಂದು ‘ಸಿವಿಲ್ ಅನ್​ರೆಸ್ಟ್ ಇಂಡೆಕ್ಸ್’ (ಸಾಮಾಜಿಕ ಅಶಾಂತಿ ಸೂಚ್ಯಂಕ) ಉಲ್ಲೇಖಿಸಿ ರಾಯಿಟರ್ಸ್​ ವರದಿ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು