1:29 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಭಾರತ ಮೂಲದ ಗರ್ಭಿಣಿ ಸಾವು; ಪೋರ್ಚುಗಲ್ ಆರೋಗ್ಯ ಸಚಿವೆ ಡಾ. ಮಾರ್ಟಾ ಟೆಮಿಡೋ ರಾಜೀನಾಮೆ

01/09/2022, 12:29

ಲಿಸ್ಬಾನ್ (reporterkarnataka.com):
ಭಾರತ ಮೂಲದ ಮಹಿಳೆಯ ಸಾವಿನಿಂದ ಪೋರ್ಚುಗಲ್‌ ಆರೋಗ್ಯ ಸಚಿವರ ತಲೆದಂಡವಾಗಿದೆ. ಭಾರತದ ಗರ್ಭಿಣಿ  ಪ್ರವಾಸಿ ಮಹಿಳೆಯೊಬ್ಬರಿಗೆ  ಸಂಪೂರ್ಣ ಹೆರಿಗೆ ವಾರ್ಡ್‌ನಲ್ಲಿ ಅವಕಾಶ ನೀಡದ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಪೋರ್ಚುಗಲ್‌ ಆರೋಗ್ಯ ಸಚಿವೆ ಡಾ. ಮಾರ್ಟಾ ಟೆಮಿಡೋ ರಾಜೀನಾಮೆ ನೀಡಿದ್ದಾರೆ.

34 ವರ್ಷದ ಭಾರತೀಯ ಮಹಿಳೆಯನ್ನು ಲಿಸ್ಬನ್ ಆಸ್ಪತ್ರೆಗಳ ನಡುವೆ ವರ್ಗಾವಣೆ ಮಾಡುವಾಗ ಆಕೆ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾದರು ಎಂದು ವರದಿಯಾಗಿದೆ. ಪೋರ್ಚುಗೀಸ್ ಮಾತೃತ್ವ ಘಟಕಗಳಾದ್ಯಂತ ಸಿಬ್ಬಂದಿ ಕೊರತೆಯ ಆರೋಪಗಳ ಬೆನ್ನಲ್ಲೇ ಈ ಘಟನೆ ನಡೆದಿದೆ.

ಡಾ. ಮಾರ್ಟಾ ಟೆಮಿಡೋ ಅವರು 2018 ರಿಂದ ಆರೋಗ್ಯ ಸಚಿವರಾಗಿದ್ದರು ಮತ್ತು ಕೋವಿಡ್ (COVID – 19) ಸಮಯದಲ್ಲಿ ಸಹ ಪೋರ್ಚುಗಲ್ ಅನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಮಂಗಳವಾರ, ಡಾ. ಟೆಮಿಡೊ ಅವರು “ಇನ್ನು ಮುಂದೆ ಕಚೇರಿಯಲ್ಲಿ ಉಳಿಯಲು ಪರಿಸ್ಥಿತಿಗಳನ್ನು ಹೊಂದಿಲ್ಲ ಎಂದು ಅರಿತುಕೊಂಡಿದ್ದಾರೆ” ಎಂದು ಪೋರ್ಚುಗೀಸ್‌ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಮೂಲದ ಮಹಿಳೆಯ ಸಾವು ಆರೋಗ್ಯ ಸಚಿವೆಗಿದ್ದ ಕೊನೆ ಹುಲ್ಲುಕಡ್ಡಿಯ ಆಸರೆ ಎಂಬ ರೀತಿಯಲ್ಲಿ ಪೋರ್ಚುಗಲ್‌ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗೂ, ಇದು ಡಾ. ಮಾರ್ಟಾ ಟೆಮಿಡೋ ಅವರ ರಾಜೀನಾಮೆಗೆ ಕಾರಣವಾಯಿತು ಎಂದು ಪೋರ್ಚುಗಲ್‌ನ ಲೂಸಾ ಸುದ್ದಿ ಸಂಸ್ಥೆ (Lusa News Agency) ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು