11:29 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಗೌರಿಹಬ್ಬ; ಕಾಫಿನಾಡಿನಲ್ಲಿ ವಿಶೇಷ ಗಂಗಾ ಪೂಜೆ, ಬಾಗಿನ ಸಮರ್ಪಿಸಿದ ಮಹಿಳೆಯರು, ಮಕ್ಕಳು

30/08/2022, 21:08

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಬಣಕಲ್, ಬಾಳೂರು, ಕೊಟ್ಟಿಗೆಹಾರ ಸುತ್ತಮುತ್ತ ಮಹಿಳೆಯರು, ಮಕ್ಕಳು ವಿಶೇಷ ಗಂಗೆ ಪೂಜೆ ನಡೆಸಿ ಬಾಗಿನ ಅರ್ಪಿಸಿ ಗೌರಿಹಬ್ಬ ಆಚರಿಸಿದರು.

ದೇವನಗೂಲ್ ಗ್ರಾಮದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಗೃಹಿಣಿ ಯಶೋದಮ್ಮ, ಹಿಂದು ಸಂಪ್ರದಾಯದಲ್ಲಿ ವಿಶೇಷವಾಗಿ ಮಲೆನಾಡಿನ ಭಾಗದಲ್ಲಿ ಗೌರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬ ಮಹಿಳೆಯರ ಪಾಲಿಗೆ ಶ್ರೇಷ್ಠ ಹಬ್ಬವಾಗಿದೆ. ರಂಗೋಲಿಯ ಚಿತ್ತಾರ, ಸುಮಂಗಲಿಯರಿಗೆ ಹದಿನಾರು ಸುತ್ತಿನ ಗೌರಿ ದಾರ ಪೂಜಿಸಿ ಕೈಗೆ ಕಟ್ಟಿಕೊಳ್ಳುತ್ತಾರೆ. ಗೌರಿ ಹಬ್ಬದಂದು ಸುಮಂಗಲಿಯರಿಗೆ ನೀಡುವ ಬಾಗಿನ ಅತಿ ಶ್ರೇಷ್ಠವಾದುದು. ಅದಕ್ಕೆಂದೇ ಐದು ಮುತ್ತೈದೆಯರಿಗೆ ಈ ದಿನ ಬಾಗಿನ ನೀಡುವ ಸಂಪ್ರದಾಯವಿದೆ. ಅರಿಶಿಣ ಕುಂಕುಮ, ಹಸಿರುಬಳೆ, ಕರಿಮಣಿ ಬಾಚಣಿಗೆ, ಸೀರೆ ಅಥವಾ ಬ್ಲೌಸ್ ಪೀಸ್, ಕಾಯಿ ಹಣ್ಣು ಧಾನ್ಯಗಳನ್ನೊಳಗೊಂಡ ಬಾಗಿನ ನೀಡುವುದರಿಂದ ದಾನ ಮಾಡುವ ಪುಣ್ಯ ಲಭಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ದೇವನಗೂಲ್ ಗ್ರಾಮದ ಗೃಹೀನಿಯರಾದ ಸುಶೀಲಮ್ಮ, ಸೌಮ್ಯ, ಸುಧಾ, ಜಯಂತಿ, ಶ್ವೇತಾ, ಕುಸುಮ ಮುಂತಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು