4:23 AM Wednesday24 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ಶಿಕ್ಷಕರ ದಿನಾಚರಣೆ: ಅಮ್ಯೂಸ್‌ಮೆಂಟ್ ಪಾರ್ಕ್‌ ವಂಡ‌ರ್ ಲಾದಿಂದ ಗುರುಗಳಿಗೆ ಉಚಿತ ಪ್ರವೇಶ

26/08/2022, 20:40

ಬೆಂಗಳೂರು(reporterkarnataka.com): ದೇಶದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್‌ ವಂಡ‌ರ್ ಲಾ ಹಾಲಿಡೇಸ್ ಲಿಮಿಟೆಡ್ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳಿಂದ 300 ಶಿಕ್ಷಕರರಿಗೆ ಉಚಿತ ಪ್ರವೇಶ ನೀಡಿದೆ. 

ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಲ್ಲಿ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5ವರೆಗೆ ಉಚಿತ ಪ್ರವೇಶ ಇರಲಿದೆ. ಇದರ ಬಗ್ಗೆ 

ಮಾತನಾಡಿದ ವಂಡರ್ ಲಾ ಹಾಲಿ ಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪಿಲ್ಲಿ ಸಾಂಕ್ರಾಮಿಕ ರೋಗದ ಉದ್ದಕ್ಕೂ ಶಿಕ್ಷಕರು ಆನ್‌ಲೈನ್ ತರಗತಿ ಹೆಸರಿನಲ್ಲಿ ಮನೆ ಹಾಗೂ ಶಾಲೆ ಎರಡೂ ಸೇವೆ ಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಜೀವನದ ಪಾಠ ಕಲಿಸುವ

ಈ ಮಾರ್ಗದರ್ಶಕರನ್ನು ವಂಡರ್‌ ಲಾ ಗೌರವಿಸುವ ಉದ್ದೇಶದಿಂದ ಈ ಕೊಡುಗೆ ನೀಡುತ್ತಿದೆ. ಇದಷ್ಟೇ ಅಲ್ಲದೆ, ಆಗಸ್ಟ್ 29 ರಿಂದ ಸೆಪ್ಟೆಂಬರ್ 5 ರ ಅವಧಿಯಲ್ಲಿ ವಂಡರ್‌ ಲಾ ಪಾರ್ಕ್‌ಗೆ ಭೇಟಿ ನೀಡುವ ಎಲ್ಲಾ ಶಿಕ್ಷಕರಿಗೂ ತಮ್ಮ ಬುಕಿಂಗ್‌ಗಳ ಮೇಲೆ ಶೇ. 20 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.ಈ ಕೊಡುಗೆ ಯನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ಕೊಂಡೊಯ್ಯಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು