12:46 PM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ಅತುಲ್ಯಾದಿಂದ ಕೂದಲು ಆರೈಕೆಗೆ ವೆಜ್ ಕೆರಟಿನ್ ಉತ್ಪನ್ನ ಬಿಡುಗಡೆ: ಕೂದಲು ಹಾನಿ, ಸೀಳುವಿಕೆ ತಡೆ  

25/06/2021, 07:01

ಬೆಂಗಳೂರು(reporterkarnataka news) : ಭಾರತದಲ್ಲೇ ಉತ್ಪಾದಿಸಿ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಬಯೋಕಾನ್ ಬಯೋ ಲೈಫ್‍ಸೈನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಅತುಲ್ಯಾ ಇದೀಗ ವೆಜ್ ಕೆರಟಿನ್ ಮತ್ತು ಗೋಧಿ ಪ್ರೊಟೀನ್ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಪ್ರಾಣಿಗಳ ಕೆರಟಿನ್‍ಗೆ ಪರ್ಯಾಯವಾಗಿ ತರಕಾರಿ ಮೂಲ ವೆಜ್ ಕೆರಟಿನ್‍ನಿಂದ ಉತ್ಪಾದಿಸಿದ ಹೇರ್ ಶ್ಯಾಂಪೂ, ಕಂಡೀಷನರ್, ಹೇರ್ ಆಯಿಲ್ ಮತ್ತು ಹೇರ್ ಮಾಸ್ಕ್ ಉತ್ಪನ್ನ ಶ್ರೇಣಿಯನ್ನು ಅತುಲ್ಯ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಹೊಸ ಉತ್ಪನ್ನ ಶ್ರೇಣಿಯ ಬಿಡುಗಡೆಯ ಜತೆಗೆ #ಸ್ವಿಚ್‍ಟೂವೆಜ್‍ಕೆರಟಿನ್ ಅಭಿಯಾನವನ್ನೂ ಆರಂಭಿಸಿದ್ದು, ಇದರ ಮೂಲಕ ವೆಜ್ ಕೆರಟಿನ್ ಬಳಸುವ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಿದೆ.

ವೆಜ್ ಕೆರಟಿನ್‍ನಿಂದ ಮಾಡಲ್ಪಟ್ಟ ಈ ವಿಶಿಷ್ಟ ಶ್ರೇಣಿಯ ಹೇರ್ ಕೇರ್ ಉತ್ಪನ್ನಗಳನ್ನು ನಾವು ಬಿಡುಗಡೆ ಮಾಡಿದ್ದು, ಜನರು ಸಸ್ಯಾಹಾರಿ ಜೀವನಶೈಲಿಗೆ ಬದಲಾಗುತ್ತಿರುವುದು ನಿಜಕ್ಕೂ ಉತ್ತೇಜನಕಾರಿ ಬೆಳವಣಿಗೆ. ಇವರು ಕ್ರೌರ್ಯಮುಕ್ತ, ನೈಸರ್ಗಿಕ, ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಬಯಸಿದ್ದಾರೆ. ಆದ್ದರಿಂದ ನಾವು ಈ ವೆಜ್ ಕೆರಟಿನ್ ವಿಶಿಷ್ಟ ಉತ್ಪನ್ನ ಶ್ರೇಣಿಯನ್ನು ಬಿಡುಗಡೆ ಮಾಡಿದ್ದೇವೆ. ಇದು ಕೂದಲುಗಳಿಗೆ ಫೈಬ್ರೋಸ್ ಮರುಪೂರಣ ಮಾಡುವ ಇದು ಕೂದಲುಗಳನ್ನು ಯಾವುದೇ ಹಾನಿಯಿಂದ ಕಾಪಾಡುತ್ತದೆ ಹಾಗೂ ಪ್ರೊಟೀನ್ ಮರುಪೂರಣ ಮಾಡುತ್ತದೆ. ಇದು ಕೂದಲಿನ ಸೀಳುವಿಕೆ ತಡೆ ವ್ಯವಸ್ಥೆಯಾಗಿ ಕೆಲಸ ಮಾಡುತ್ತದೆ” ಎಂದು ಬಿಯೋಕಾನ್ ಬಯೋ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌರವ್ ಸಿಂಗ್ ಹೇಳಿದರು.

ವೆಜ್ ಕೆರಟಿನ್‍ನಿಂದ ಹೊರತಾಗಿ, ಗೋಧಿ ಪ್ರೊಟೀನ್ ಮತ್ತು ಇತರ ಮಹತ್ವದ ಪೋಷಕಾಂಶಗಳು ಈ ಉತ್ಪನ್ನಗಳಲ್ಲಿ ಕೂಡಿದ್ದು, ಇದು ನಿಮ್ಮ ಕೂದಲಿನ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತವೆ. ನಿಮ್ಮ ಕೂದಲುಗಳನ್ನು ಆರೋಗ್ಯಕರವಾಗಿ ಇಡುವ ಜತೆಗೆ ಹರಿಯವಂತೆ ಮಾಡುತ್ತದೆ. ಗೋಧಿ ಪ್ರೊಟೀನ್, ಫೆಂಗ್ಯುಗ್ರೀಕ್, ರೀಥಾ, ವೆಜ್ ಕೆರಟಿನ್, ಬಾದಾಮಿ ಮತ್ತು ಬ್ರಾಹ್ಮಿಯಿಂದ ಮಾಡಲ್ಪಟ್ಟ ಅತುಲ್ಯಾ ಕೆರಟಿನ್ & ವೀಟ್ ಪ್ರೊಟಿನ್ ಶ್ಯಾಂಪೂ, ಕೂದಲುಗಳನ್ನು ಆಳದಿಂದ ಸ್ವಚ್ಛಗೊಳಿಸುತ್ತದೆ ಹಾಗೂ ಕೂದಲುಗಳನ್ನು ತೀವ್ರವಾಗಿ ಪೋಷಿಸುತ್ತದೆ. ಕೂದಲು ಮತ್ತು ಚರ್ಮವನ್ನು ತೇವಗೊಳಿಸಿ ಉತ್ತಮ ಹಾಗೂ ನಯವಾದ ಅನುಭವವನ್ನು ಸುಂದರ ಕೂದಲುಗಳ ರೂಪದಲ್ಲಿ ನೀಡುತ್ತದೆ. ಅತುಲ್ಯಾ ಕೆರಟಿನ್ ಉತ್ಪನ್ನಗಳುwww.atulyaherbals.com ವೆಬ್‍ಸೈಟ್‍ನಲ್ಲೂ ಮತ್ತು ಅಮೆಜಾನ್‍ನಲ್ಲೂ ಲಭ್ಯ. 

ಇತ್ತೀಚಿನ ಸುದ್ದಿ

ಜಾಹೀರಾತು